ಮೂರ್ತಿ ಸೋಂಪುರ
ಕೊರಟಗೆರೆ: ಗ್ರಾಮೀಣ ಭಾಗಕ್ಕೆ ನೀರು ಪೂರೈಸುವ ಜೆಜೆಎಂ ಕಾಮಗಾರಿ ರಾಜ್ಯದಲ್ಲಿ ಹುಸಿಯಾಗಿದೆ, ಕಾಮಗಾರಿ ನೆಪದಲ್ಲಿ ರಸ್ತೆ ಹಾಳು ಮಾಡಿಕೆಲಸ ಮಾಡುವುದು ಎಷ್ಟು ಸರಿ? ಒಂದು ಮೀಟರ್ ಅಡಿ ಆಳದಲ್ಲಿ ಪೈಪ್ ಹಾಕದೆ ಎರಡು ಅಡಿಯ ಮೇಲೆ ಪೈಪ್ ಹಾಕಿ ಅಡ್ಡದಿಡ್ಡಿ ಕಾಮಗಾರಿ ಮುಗಿಸುತ್ತಾರೆ, ಸಾರ್ವಜನಿಕರು ಸಮಸ್ಯೆಯ ಬಗ್ಗೆಪ್ರಶ್ನೆ ಮಾಡಿದರೆ ಧಮ್ಕಿ ಹಾಕುತ್ತಾರೆ ಕೆಲಸ ಮಾಡಿಸುವ ಮೇಸ್ತ್ರೀ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರಾಷ್ಟ್ರೀಯ ಜಲ ಜೀವನ್ ಮಿಷನ್ ಕಾಮಗಾರಿ ಪ್ರಾರಂಭಗೊಂಡಿದ್ದು, ಸುಮಾರು 6 ಕೋಟಿ 38 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ, ಸರ್ಕಾರದ ನಿಯಮವಳಿಗಳನ್ನೇ ಗಾಳಿ ತೂರಿ ಕಾಮಗಾರಿ ಪೂರ್ಣಗೊಳಿಸಿ ಹಣ ಪಡೆಯುವ ಹುನ್ನಾರ ಗುತ್ತಿಗೆದಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಪೈಪ್ ಲೈನ್ ಮಾಡುವ ಸಂದರ್ಭದಲ್ಲಿ ಹಳೆಯ ಪೈಪ್ ಲೈನ್ ಹೊಡೆದು ಹಾಕಿ ಮನೆಗೆ ಬರುತ್ತಿದ್ದ ನೀರು ಕೂಡ ಬರುತ್ತಿಲ್ಲ, ನಮ್ಮ ಸಮಸ್ಯೆಯನ್ನ ಯಾರಿಗೆ ಹೇಳೋದು, ಇತ್ತಗ್ರಾಪಂ ಅಧಿಕಾರಿಗಳು ಬರಲ್ಲ, ಇತ್ತ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬರಲ್ಲ, ಯಾರಿಗೆ ಹೇಳೋದು ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
Comments are closed.