ಕೇದಿಗೆಹಳ್ಳಿ ಪಾಳ್ಯದಲ್ಲಿ ನೀರಿನ ಹಾಹಾಕಾರ

ಪುರಸಭೆ ಅಧಿಕಾರಿಗಳ ಉದಾಸಿನ- ಬಿಂದಿಗೆ ಹಿಡಿದು ಮಹಿಳೆಯರ ಆಕ್ರೋಶ

4

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಕೇದಿಗೆಹಳ್ಳಿ ಪಾಳ್ಯದಲ್ಲಿ ಕಳೆದ ಒಂದು ವಾರಗಳಿಂದ ಪುರಸಭೆಯ ನಲ್ಲಿಗಳಲ್ಲಿ ನೀರು ಬರದೆ ನೀರಿನ ಹಾಹಾಕಾರ ಕೃತಕವಾಗಿ ಸೃಷ್ಟಿಯಾಗಿದೆ ಎಂದು ಗ್ರಾಮದ ಮಹಿಳೆಯರು ನೀರಿನ ಬಿಂದಿಗೆ ಹಿಡಿದು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇದಿಗೆಹಳ್ಳಿ ಪಾಳ್ಯದಲ್ಲಿ ಬಹುತೇಕ ಜನರು ರೈತಾಪಿ ವರ್ಗಕ್ಕೆ ಸೇರಿದ್ದು ಜನ ಜಾನುವಾರುಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿದ್ದು ಕಳೆದ ಒಂದು ವಾರದಿಂದ ನಲ್ಲಿಗಳಲ್ಲಿ ನೀರು ಬರುತ್ತಿಲ್ಲವಾಗಿದ್ದು, ದಿನನಿತ್ಯದ ಬಳಕೆಗೂ ಸಹ ನೀರಿರಾಗಿ ಪರದಾಡುವಂತಾಗಿದೆ, ದೂರದ ತೋಟಗಳ ಕೊಳವೆಬಾವಿಗಳಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ, ಪುರಸಭೆಯ ಬೋರ್ ವೆಲ್ ಗಳಲ್ಲಿ ನೀರಿದ್ದು ಪೈಪ್ ಲೈನ್, ಮೋಟರ್ ಸಮಸ್ಯೆಗಳಿಂದ ಕೃತಕವಾಗಿ ನೀರಿನ ಹಾಹಾಕಾರ ಸೃಷ್ಟಿಯಾಗಿದೆ, ಬಿಸಿಲಿನ ತಾಪಮಾನ ಹೆಚ್ಚಾಗಿದ್ದು , ಮೂಖ ಪ್ರಾಣಿಗಳು- ಜಾನುವಾರುಗಳಿಗೆ ನೀರು ಕುಡಿಸಲು ಸಹ ನೀರಿಗಾಗಿ ಪರದಾಡುವಂತಾಗಿದೆ, ಪೈಪ್ ಲೈನ್ ಹಾಗೂ ಮೋಟರ್ಗಳ ತಾಂತ್ರಿಕ ಸಮಸ್ಯೆಗಳಾದರು ಅದನ್ನು ಸರಿಪಡಿಸಲು 9 ದಿನ ಬೇಕಾ, ಸಂಬಂದಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಮಹಿಳೆಯರು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!