ಕೊರಟಗೆರೆ: ಕರುನಾಡಿನ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಸರಕಾರದ ಕೊವೀಡ್-19 ಮಾರ್ಗಸೂಚಿ ಆದೇಶದ ಅನ್ವಯ ಮಾ.21 ರಿಂದ ಮೇ 4ರ ವರೆಗೆ ಬಂದ್ ಮಾಡಲಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ 14 ದಿನಗಳ ಕಾಲ ನಿರ್ಬಂಧಿಸಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕೇಶವಮೂರ್ತಿ ತಿಳಿಸಿದ್ದಾರೆ.
ಸರಕಾರದ ಆದೇಶ ಮತ್ತು ಮುಂದಿನ ಮಾರ್ಗಸೂಚಿ ಬರುವ ತನಕ ಭಕ್ತಾದಿಗಳು ದೇವಾಲಯಕ್ಕೆ ಬರುವುದು ಬೇಡ, ಕೊರೊನಾ ರೋಗತಡೆಗೆ ಭಕ್ತಾದಿಗಳ ಸಹಕಾರ ಅಗತ್ಯವಾಗಿದೆ, ಪುಣ್ಯ ಕ್ಷೇತ್ರಕ್ಕೆ ಬಂದು ದರ್ಶನ ಇಲ್ಲದೆ ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ಬಂದ್
Get real time updates directly on you device, subscribe now.
Next Post
Comments are closed.