ಎಲ್ ಐಸಿ ಯೊಜನೆ ಪ್ರಯೋಜನ ತಿಳಿಸಲು ಸಲಹೆ

ತುಮಕೂರು ವಿಭಾಗ ಮಟ್ಟದ ಎಲ್ ಐಸಿ ಪ್ರತಿನಿಧಿಗಳ ಸಮಾವೇಶ

3

Get real time updates directly on you device, subscribe now.


ತುಮಕೂರು: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ನಿಗಮ ಜಾರಿಗೆ ತಂದಿರುವ ಹೊಸ ಯೋಜನೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಪಾಲಿಸಿದಾರರಿಗೆ ಅವುಗಳ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಕೊಟ್ಟು ವ್ಯವಹಾರ ವಿಸ್ತರಿಸುವಂತೆ ನಿಗಮದ ಬೆಂಗಳೂರು ವಿಭಾಗದ ಹಿರಿಯ ವಿಭಾಗ ಅಧಿಕಾರಿ ಪಿ.ಎನ್.ಝಾ ಸಲಹೆ ಮಾಡಿದರು.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ವಿಭಾಗದ ಎಲ್ ಐಸಿ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹೊಸ ವರ್ಷದ ಪ್ರಯುಕ್ತ ನಿಗಮವು ಪಾಲಿಸಿದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ, ಈ ತಿಂಗಳ 9ರ ವರೆಗೆ ಹೊಸ ಪಾಲಿಸಿ ಮಾಡಿಸುವವರಿಗೆ ಅಯೋಧ್ಯೆಯ ರಾಮ ಲಲ್ಲಾ ಮೂರ್ತಿಯನ್ನು ಕೊಡುಗೆ ನೀಡಲಾಗುತ್ತಿದೆ ಎಂದರು.

ಮಾರ್ಕೆಟಿಂಗ್ ಮೇನೇಜರ್ ಜಾಕ್ವೆಲಿನ್ ಅಬ್ರಹಾಂ ಮಾತನಾಡಿ, ಬೆಂಗಳೂರು ವಿಭಾಗದಿಂದ ಈ ವರ್ಷ ಒಂದು ಸಾವಿರ ಕೋಟಿ ರೂ. ಗುರಿ ಸಾಧಿಸಲು ಸಂಕಲ್ಪ ಮಾಡಲಾಗಿದೆ, ಏಪ್ರಿಲ್ ನಿಂದ ಡಿಸೆಂಬರ 31ರ ವೇಳೆಗೆ 520 ಕೋಟಿ ಸಾಧ್ಯವಾಗಿದೆ, ಬರುವ ಮಾರ್ಚ್ 31ರೊಳಗೆ ಗುರಿ ದಾಟಬೇಕು, ಹೀಗಾಗಿ ಪ್ರತಿನಿಧಿಗಳು ಹೆಚ್ಚು ಪ್ರೀಮಿಯಂ ಸಂಗ್ರಹ ಮಾಡಬೇಕು ಎಂದು ಹೇಳಿದರು.
ಪಾಲಿಸಿದಾರರಿಗೆ ಆಕರ್ಷಕ ಯೋಜನೆಗಳನ್ನು ಎಲ್ ಐಸಿ ಜಾರಿಗೆ ತಂದಿದೆ, ಜೊತೆಗೆ ಪ್ರತಿನಿಧಿಗಳಿಗೂ ಲಾಭದಾಯಕ ಆಗಲಿವೆ, ಜೀವನ್ ಲಾಭ್, ಪೆನ್ಷನ್ ಸ್ಕೀಂ, ಸಿಂಗಲ್ ಪ್ರೀಮಿಯಂಗಳು ಪಾಲಿಸಿದಾರರಿಗೆ ಪ್ರಯೋಜನವಾಗಲಿವೆ, ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದರು.

ನಿಗಮದ ಮಾರಾಟ ವ್ಯವಸ್ಥಾಪಕ ಎ.ಭಾಸ್ಕರ್, ಪ್ರಾಡೆಕ್ಟ್ ಅಂಡ್ ಡಿಜಿಟಲ್ ಮೇನೇಜರ್ ಕಮರನ್ ಎಫ್. ಸಿದ್ದಿಕ್, ತುಮಕೂರು- 1ರ ಹಿರಿಯ ಶಾಖಾ ವ್ಯವಸ್ಥಾಪಕ ಗಲಗಪ್ಪ ತಳವಾರ್, ತುಮಕೂರು- 2ರ ಶಾಖಾ ವ್ಯವಸ್ಥಾಪಕ ಎಂ.ವಿ.ಶಶಿಧರ್, ಗುಬ್ಬಿ ಶಾಖೆ ವ್ಯವಸ್ಥಾಪಕ ವಿಜಯ ಕುಮಾರ್, ಕೊರಟಗೆರೆ ಶಾಖೆ ವ್ಯವಸ್ಥಾಪಕ ವಿ.ಗಣೇಶ್ ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!