ಡಿ.ಕೃಷ್ಣಕುಮಾರ್ ಗೆ 6 ನೇ ಬಾರಿಗೆ ಭರ್ಜರಿ ಗೆಲುವು

4

Get real time updates directly on you device, subscribe now.


ಕುಣಿಗಲ್: ತುಮಕೂರು ಹಾಲು ಒಕ್ಕೂಟಕ್ಕೆ ಕುಣಿಗಲ್ ತಾಲೂಕಿನಿಂದ ಸ್ಪರ್ಧಿಸಿದ್ದ ಎನ್ ಡಿಎ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಆರನೇ ಬಾರಿಗೆ ಆಯ್ಕೆಯಾಗಿದ್ದು, ಅಭಿಮಾನಿಗಳು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು.
ಜಿಲ್ಲೆಯ ವಿವಿಧ ತಾಲೂಕಿಗಳಿಂದ ಒಕ್ಕೂಟಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನಿಂದ ಸ್ಪರ್ಧಿಸಿದ್ದ ಡಿ.ಕೃಷ್ಣಕುಮಾರ್ 126 ಮತಗಳಿಸಿ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಮಾಸ್ತಿಕರಿಗೌಡ 15 ಮತಗಳಿಸಿ ಪರಾಭವಗೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಡಿ.ಕೃಷ್ಣಕುಮಾರ್ ಅವರನ್ನು ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ಎನ್ ಡಿಎ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದ್ದರ ಪರಿಣಾಮ ಡಿ.ಕೃಷ್ಣಕುಮಾರ್ ಗೆಲುವಾಗಿದೆ, ಕಾಂಗ್ರೆಸ್ ನ ಶಾಸಕ ಡಾ.ರಂಗನಾಥ್, ಚುನಾವಣೆ ಗೆಲ್ಲಲು ವಾಮಮಾರ್ಗದ ಮೂಲಕ ಸಹಕಾರ ಅಧಿಕಾರಿಗಳ ಬಳಸಿ ಆಡಳಿತ ದುರುಪಯೋಗ ಮಾಡಿಕೊಂಡು ಅಧಿಕಾರ ಹಿಡಿಯಲು ಯತ್ನಿಸಿ ಮುಖಭಂಗ ಅನುಭವಿಸಿದ್ದಾರೆ, ಈ ಗೆಲುವು ಮುಂದಿನ ಜಿಪಂ, ತಾಪಂ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.

ಡಿ.ಕೃಷ್ಣಕುಮಾರ್ ಮಾತನಾಡಿ, ಎರಡೂ ಪಕ್ಷದ ಕಾರ್ಯಕರ್ತರ ಶ್ರಮ ಗೆಲುವಿಗೆ ಕಾರಣವಾಗಿದೆ, ಕಾಂಗ್ರೆಸ್ ಗೆ ಅಭ್ಯರ್ಥಿ ಸಿಗದ ಕಾರಣ ಹಾಲು ಉತ್ಪಾದಕರ ಸಹಕಾರ ಸಂಘದ ಬಿಜೆಪಿ ಪಕ್ಷದವರನ್ನೆ ಕರೆದುಕೊಂಡು ಹೋಗಿ ನಿಲ್ಲಿಸಿ ಸೋಲುಂಡಿದ್ದಾರೆ, ಅಧಿಕಾರ ಹಿಡಿಯಲು ಶಾಸಕರು ಯಾವುದೇ ಕೆಲಸ ಮಾಡದೆ ಏಕಾಏಕಿ ಹೈಕೋರ್ಟ್ ಮೆಟ್ಟಿಲೇರಿದಲ್ಲದೆ ಸಹಕಾರ ಇಲಾಖೆಯ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಇಲ್ಲಸಲ್ಲದ ಆರೋಪ ಮಾಡಿದರು, ಇದಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!