ರಂಗಭೂಮಿಗೆ ನರಸಿಂಹರಾಜು ಕೊಡುಗೆ ಅಪಾರ

1

Get real time updates directly on you device, subscribe now.

ಗುಬ್ಬಿ: ರಂಗ ದಿಗ್ಗಜ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಕಟ್ಟಿರುವ ರಂಗಮಂದಿರದಲ್ಲಿ ಸಂಸ್ಕೃತಿ ಪರಂಪರೆ ಉಳಿಸಲು ಇಲ್ಲಿಯವರೆಗೆ ಹಲವಾರು ನಾಟಕ ಗಳನ್ನು ಮಾಡಿದ್ದೀವಿ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಾಸ್ಯ ಬ್ರಹ್ಮ ನರಸಿಂಹರಾಜು ಅವರ ಜನ್ಮದಿನೋತ್ಸವದ ಹಿನ್ನೆಲೆ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನರಸಿಂಹರಾಜು ಅವರು ರಂಗಭೂಮಿಯಲ್ಲಿ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ತನ್ನದೇ ಆದ ಇತಿಹಾಸ ಬಿಟ್ಟು ಹೋದವರು, ಬಹಳ ಹಿಂದೆ ನಗುವಿನ ಕಚಗುಳಿ ಇಟ್ಟವರು ಬಾಲಕೃಷ್ಣ ಹಾಗೂ ನರಸಿಂಹರಾಜು ಅಂತವರು ಮಹಾನ್ ನಟರು, ಗುಬ್ಬಿ ವೀರಣ್ಣನವರ ಗರಡಿಯಲ್ಲಿ ಬೆಳೆದಂತಹ ಮಹಾನ್ ವ್ಯಕ್ತಿಗಳು, ಅಂಥವರ ಜನ್ಮ ಶತಮಾನೋತ್ಸವ ಗುಬ್ಬಿಯಲ್ಲಿ ನಾಟಕೋತ್ಸವದ ಮೂಲಕ ಆಚರಿಸುತ್ತಿರುವುದು ಅತ್ಯಂತ ಹೆಚ್ಚು ಸಂತೋಷ ನೀಡುತ್ತದೆ ಎಂದರು.

ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿ ನಾಟಕಗಳನ್ನ ಹೆಚ್ಚು ಹೆಚ್ಚು ಮಾಡುತ್ತಲೇ ಇದ್ದೇವೆ, ಆದರೆ ಗುಬ್ಬಿಯ ಜನರು ಬರುತ್ತಿರುವುದು ಮಾತ್ರ ಕಡಿಮೆಯಾಗುತ್ತಿದೆ, ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದಾಗ
ಗುಬ್ಬಿಯ ಜನ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ, ಐದು ದಿನಗಳ ಕಾಲ ನಡೆದಂತಹ ಈ ಒಂದು ನಾಟಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಭಾಗಗಳಿಂದ ಕಲಾವಿದರು ಆಗಮಿಸಿ ವಿಶೇಷ ನಾಟಕ ಮಾಡಿದ್ದಾರೆ, ಮುಂದಿನ ದಿನದಲ್ಲಿಯೂ ಗುಬ್ಬಿ ವೀರಣ್ಣ ಟ್ರಸ್ಟ್ ಸಹಯೋಗದಲ್ಲಿ ಹಲವು ಕಾರ್ಯಕ್ರಮ ನಾಟಕ ಅಕಾಡೆಮಿಯಿಂದ ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರವಿ ಸಿರಿವರ, ನಾಟಕದ ನಿರ್ದೇಶಕಿ ದಾಕ್ಷಾಯಣಿ ಭಟ್ ಹಾಜರಿದ್ದರು, ನಾಟಕೋತ್ಸವದಲ್ಲಿ ಕೊನೆಯ ದಿನ ತಾಜ್ ಮಹಲ್ ಟೆಂಡರ್ ನಾಟಕ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!