ಗುಬ್ಬಿ: ಎಮ್ಮೆಗೆ ನೀರು ಕುಡಿಸಲು ಕೆರೆಗೆ ಹೋಗಿದ್ದ ಸಂದರ್ಭದಲ್ಲಿ ಎಮ್ಮೆ ಮತ್ತು ಕರುಗಳು ನೀರಿಗೆ ಎಳೆದುಕೊಂಡು ಹೋದ ಸಂದರ್ಭದಲ್ಲಿ ಮಗಳಜೀವ ಉಳಿಸಲು ಹೋಗಿ ತಾಯಿ ಕೂಡ ನೀರು ಪಾಲಾದ ಘಟನೆ ನಡೆದಿದೆ.
ತಾಲೂಕಿನ ನಿಟ್ಟೂರು ಹೋಬಳಿಯ ವಿರುಪಾಕ್ಷಿಪುರ ಗ್ರಾಮದ ವಾಸಿಯಾದ ಪ್ರೇಮಕುಮಾರಿ( 50) ಮಗಳು ಪೂರ್ಣಿಮಾ (30) ಮೃತ ದುರ್ದೈವಿಗಳಾಗಿದ್ದಾರೆ.
ವಿರುಪಾಕ್ಷಿಪುರ ಗ್ರಾಮದಲ್ಲಿ ವಾಸವಾಗಿದ್ದ ತಾಯಿ, ಮಗಳು ವೃತ್ತಿಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಿದ್ದರು, ಮಗಳು ಪೂರ್ಣಿಮಾ ಬುದ್ಧಿಮಾಂದ್ಯ ಯುವತಿಯಾಗಿದ್ದು, ಈಕೆಯು ದಿನನಿತ್ಯ ತಾಯಿಯ ಜೊತೆ ತೋಟಕ್ಕೆ ತೆರಳುತ್ತಿದ್ದಳು.
ಗುರುವಾರ ಎಂದಿನಂತೆ ಎಮ್ಮೆ ಮೇಯಿಸಲು ತಮ್ಮ ತೋಟಕ್ಕೆ ತೆರಳಿದಾಗ ಸಮೀಪದಲ್ಲಿ ಇರುವ ಅದಲಗೆರೆ ಕೆರೆಗೆ ಎಮ್ಮೆಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಆಳವಾದ ಹೊಂಡದಲ್ಲಿ ಎಮ್ಮೆ ಮತ್ತು ಕರುಗಳು ನೀರಿಗೆ ಇಳಿದ ಕಾರಣ ಅವುಗಳನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ತಾಯಿ ಮತ್ತು ಮಗಳು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ತಮ್ಮ ತೋಟಕ್ಕೆ ತೆರಳಿದ ಗ್ರಾಮಸ್ಥರು ಕೆರೆಯಲ್ಲಿ ಮೃತದೇಹಗಳು ನೀರಿನಲ್ಲಿ ತೇರುತ್ತಿರುವ ದೃಶ್ಯ ಕಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದಾಗಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ, ಘಟನಾ ಸ್ಥಳಕ್ಕೆ ಆಗಮಿಸಿದ ಅಪಾರ ಜಿಲ್ಲಾ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಪರಿಶೀಲನೆ ನಡೆಸಿದರು, ಈ ಸಂಬಂಧ ಚೇಳೊರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.