ಮಧುಗಿರಿ: ಅತಿ ಕಿರಿಯ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕಗಳನ್ನು ಬಳಕೆ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಪುರಸಭಾಧ್ಯಕ್ಷ ಲಾಲಪೇಟೆ ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣಾದಲ್ಲಿ ಮೌಂಟ್ ವ್ಯೂ ಪಬ್ಲಿಕ್ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚೆಗೆ ಮಕ್ಕಳು ಮೊಬೈಲ್ ಬಳಕೆ ಕಡೆ ಗಮನ ಹರಿಸುತ್ತಿರುವ ಪರಿಣಾಮ ಅವರ ಕಣ್ಣುಗಳು ತೊಂದರೆಗೀಡಾಗುತ್ತಿದ್ದು ಕಡಿಮೆ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಾಗಿದ್ದು ಪೋಷಕರು ಹೆಚ್ಚು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕಿವಿ ಮಾತು ಹೇಳಿದರು.
ಕಣ್ಣು ಮಾನವನ ಪ್ರಮುಖ ಅಂಗವಾಗಿದ್ದು ಕಣ್ಣಿನ ಸಂರಕ್ಷಣೆಯ ಮಕ್ಕಳು ಗಮನ ಹರಿಸಬೇಕು.ನಿರಂತರ ಕಲಿಕೆ ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆ ಗಳಿಸಲು ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಹನುಮಂತರಾಯಪ್ಪ ಮಾತನಾಡಿ, ಪಾಠಗಳ ಜತೆಯಲ್ಲಿ ಆಟಗಳು ಬಹಳ ಮುಖ್ಯವಾಗಿದ್ದು ಮಕ್ಕಳ ಮಾನಸಿಕವಾಗಿ ಆರೋಗ್ಯಕರವಾಗಿ ಸದೃಢರಾಗಲು ಕ್ರೀಡೆಯು ಸಹಕಾರಿಯಾಗಿದ್ದು ಶಾಲೆಗಳಲ್ಲಿ ಕಾಲ ಕಾಲಕ್ಕೆ ವಾರ್ಷಿಕೋತ್ಸವ ಹಾಗೂ ಕ್ರೀಡಾಕೂಟಗಳ ಆಯೋಜಿಸ ಬೇಕು, ಪ್ರತಿಯೊಬ್ಬ ಮಗುವು ಯಾವುದಾದರೊಂದು ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತಾಗ ಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭರತನಾಟ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರಾವ್ಯ ಹಾಗೂ ಚೆನೈ ನಲ್ಲಿ ನಡೆದ ಅಬಕಾಸ್ ಕಾರ್ಯಕ್ರಮದ ದಕ್ಷಿಣ ಭಾರತದ ವಿಭಾಗದಲ್ಲಿ ಜ್ಞಾನವ್ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ವಕೀಲ ಪಿ.ಡಿ.ದತ್ತಾತ್ರೇಯ, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ , ಪಿಎಸ್ಐ ಮುತ್ತುರಾಜು, ಕಾರ್ಯದರ್ಶಿ ಜಿ.ಎಸ್.ಜಗದೀಶ್ ಕುಮಾರ್, ಎಸ್ ಬಿಟಿ ಬಸ್ ಮಾಲೀಕ ಎಂ.ಜಿ ಮಂಜುನಾಥ್, ಟಿಪಿಓ ಯರಗಾಮಯ್ಯ, ಬಿಆರ್ ಟಿ ದಾಸಪ್ಪ, ಬಿಆರ್ಸಿ ತಿಮ್ಮರಾಜು, ರಾಘವೇಂದ್ರ, ಎಸ್ಎಂ ಆಂಗ್ಲ ಶಾಲೆಯ ಮುಖ್ಯ ಶಿಕ್ಷಕ ಅಜ್ಗರ್ ನೈನಿ, ಮುಖ್ಯ ಶಿಕ್ಷಕಿ ವಾಸಂತಿ ಹಾಗು ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
Comments are closed.