ಅಮೃತೂರು ಪಿಎಸೈ ಮೇಲೆ ಕ್ರಮಕ್ಕೆ ಆಗ್ರಹ

2

Get real time updates directly on you device, subscribe now.


ಕುಣಿಗಲ್: ಅಮೃತೂರು ಪಿಎಸೈ ದಲಿತ ಮುಖಂಡರೊಂದಿಗೆ ಅಸಭ್ಯವಾಗಿ ನಡೆದುಕೊಂಡು ಬೆದರಿಕೆ ಹಾಕಿರುವುದನ್ನು ಖಂಡಿಸಿ, ಹುಲಿಯೂರು ದುರ್ಗದಲ್ಲಿ ಕರೆಯಲಾಗಿದ್ದ ದಲಿತರ ಕುಂದು ಕೊರತೆ ಸಭೆಯನ್ನು ದಲಿತರು ಬಹಿಷ್ಕರಿಸಿ ಉದ್ಧಟತನ ತೋರಿರುವ ಅಮೃತೂರು ಪಿಎಸೈ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮೃತೂರು ಸಿಪಿಐ ಮಾದ್ಯಾನಾಯಕ್ ಗೆ ಮನವಿ ಸಲ್ಲಿಸಿದರು.

ಸೋಮವಾರ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತರ ಕುಂದುಕೊರತೆ ಸಭೆಯನ್ನು ಅಮೃತೂರು ಸಿಪಿಐ ಮಾದ್ಯಾ ನಾಯಕ್, ಹುಲಿಯೂರು ದುರ್ಗ ಪಿಎಸೈ ಪ್ರಶಾಂತ ನೇತೃತ್ವದಲ್ಲಿ ಕರೆಯಲಾಗಿತ್ತು, ಸಭೆಯ ಆರಂಭದಲ್ಲಿ ದಲಿತ ಮುಖಂಡರು ಅಮೃತೂರು ವೃತ್ತದ ವ್ಯಾಪ್ತಿಗೆ ಬರುವ ಅಮೃತೂರು ಪಿಎಸೈ ಅವರು ರಸ್ತೆ ಅಪಘಾತ ಪ್ರಕರಣದಲ್ಲಿ ದಲಿತ ಮುಖಂಡ ಮೃತ ಪಟ್ಟಿದ್ದು ಘಟನೆ ಸಂಬಂಧಿಸಿದಂತೆ ಮಹಜರು ಮಾಡುವ ವೇಳೆ ಸ್ಥಳಕ್ಕೆ ಬಂದಿದ್ದ ಇತರೆ ದಲಿತ ಮುಖಂಡರು, ದಲಿತ ಯುವಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಇದನ್ನು ಪ್ರಶ್ನಿಸಿದ ಯುವಕರಿಗೆ ಹಟ್ಟಿಗೆ ನುಗ್ಗಿ ಹೊಡೆಯುತ್ತೇನೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಸಹ ಹಾಕಿದ್ದಾರೆ, ಕಾನೂನು ಪಾಲಿಸಿ, ಶೋಷಿತ ಜನಾಂಗಕ್ಕೆ ರಕ್ಷಣೆ ನೀಡಬೇಕಾದ ಅಧಿಕಾರಿ ಕರ್ತವ್ಯ ಮರೆತು ಬೆದರಿಕೆ ಹಾಕಿರುವುದು ಖಂಡನೀಯ, ಆದ್ದರಿಂದ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ಹೇಳಿ ಅಮೃತೂರು ಪಿಎಸೈ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ರಾಜು, ರಾಮಕೃಷ್ಣಯ್ಯ, ಶಿವಕುಮಾರ, ಹಟ್ಟಿರಂಗಣ್ಣ, ಪುಟ್ಟಬೋರಯ್ಯ, ಶಂಕರ, ನಾಗೇಶ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!