ತುಮಕೂರು: ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಮೂಡಿಸಿ, ನಮ್ಮ ಧಾರ್ಮಿರ ಪರಂಪರೆಯ ಮೌಲ್ಯವನ್ನು ಸಾರಿದ್ದಾರೆ, ಅವರು ಈ ಶತಮಾನದ ಮಹಾನ್ ಯೋಗಿಯಾಗಿದ್ದಾರೆ, ಸಮಾಜಕ್ಕೆ ಅವರು ಕೊಟ್ಟ ಕೊಡುಗೆ ಅಪಾರ, ಸಮಾಜ ಬಾಂಧವರು ಸ್ವಾಮೀಜಿಗಳಿಗೆ ಋಣಿಯಾಗಿರಬೇಕು ಎಂದು ಕುಣಿಗಲ್ ತಾಲ್ಲೂಕು ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟ ಹಾಗೂ ವಿವಿಧ ಒಕ್ಕಲಿಗ ಸಂಘಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ನಗರದ ಬಿಜಿಎಸ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 12ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ ಭಾವಚಿತ್ರ ಹಾಗೂ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಬಾಲಗಂಗಾಧರ ನಾಥ ಸ್ವಾಮೀಜಿಗಳ ಸೇವೆ ಹಾಗೂ ಕೊಡುಗೆ ಒಂದೇ ವರ್ಗಕ್ಕೆ ಸೀಮಿತವಾಗಿರಲಿಲ್ಲ, ಹಿಂದುಳಿದ ವರ್ಗಗಳ ಸ್ವಾಮೀಜಿ ಮಠ ಸ್ಥಾಪನೆ ಮಾಡಲು ಪ್ರೇರಣೆ ನೀಡಿ ಆ ಮೂಲಕ ಆ ಸಮಾಜದ ಧಾರ್ಮಿಕ ಪರಂಪರೆ ಮುಂದುವರೆಸಲು ನೆರವಾದರು ಎಂದು ಹೇಳಿದರು.
ಶಾಸಕ ಬಿ.ಸುರೇಶ್ ಗೌಡರು ಮಾತನಾಡಿ, ಸ್ವಾಮೀಜಿಗಳ ಪುಣ್ಯಸ್ಮರಣೆಯಂತಹ ಕಾರ್ಯಕ್ರಮ ಒಕ್ಕಲಿಗರ ಕುಟುಂಬದ ಆಚರಣೆಯಾಗಬೇಕು, ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲ ಎಂಬ ಆಪಾದನೆಗಳಿವೆ, ಒಕ್ಕಲಿಗರ ಸಂಘಟಿತರಾಗಿ ನಮ್ಮ ಅಸ್ತಿತ್ವ ಸಾರಬೇಕು, ಬಾಲಗಂಗಾಧರನಾಥ ಸ್ವಾಮೀಜಿ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಸ್ವಾಮೀಜಿಗಳ ಪುಣ್ಯಸ್ಮರಣೆ ಪುಣ್ಯದ ಕಾರ್ಯ, ಪೂಜ್ಯರು ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ, ಶಾಲಾ ಕಾಲೇಜು, ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿ ಸಮಾಜಕ್ಕೆ ನೆರವಾಗಿದ್ದಾರೆ, ಸೇವೆ ಮೂಲಕ ವಿಶ್ವದಲ್ಲೇ ಹೆಸರಾಗಿದ್ದಾರೆ, ಅರೇಶಂಕರ ಮಠ ಸೇರಿದಂತೆ ನಮ್ಮ ಸಮುದಾಯದ ಮಠಗಳ ಬೆಳವಣಿಗೆಗೆ ಭಕ್ತರು ಕೈ ಜೋಡಿಸಿ, ಹೆಚ್ಚು ಸೇವಾ ಕಾರ್ಯ ನಡೆಯಲು ಸಹಕರಿಸಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ವಿಜಯಕುಮಾರ್, ಉಪಾಧ್ಯಕ್ಷ ಭೈರವ ಗಿರೀಶ್, ಕಾರ್ಯದರ್ಶಿ ಹೆಚ್ಎಂಟಿ ಬೋರೇಗೌಡ, ಖಜಾಂಚಿ ವಿಶ್ವೇಶ್ವರಯ್ಯ,ವಿವಿಧ ಸಂಘಸಂಸ್ಥೆಗಳ ಮುಖಂಡರಾದನರಸೇಗೌಡ, ರಂಗಪ್ಪ, ವೆಂಕಟೇಶಬಾಬು, ಬೆಳ್ಳಿ ಲೋಕೇಶ್, ದೊಡ್ಡಲಿಂಗಪ್ಪ, ಟಿ.ಆರ್.ನಾಗರಾಜ್, ಜೆ.ಕುಮಾರ್, ನೇತಾಜಿ ಶ್ರೀಧರ್, ಬ್ಯಾಟರಂಗೇಗೌಡ, ಆರ್.ಕಾಮರಾಜ್, ಎಂ.ಕೆ.ವೀರಯ್ಯ, ದೇವೇಗೌಡ, ಸಿದ್ಧಲಿಂಗೇಗೌಡ, ರಂಗಮಣಿ ಕಾಮೇಶ್, ಪ್ರೊ.ಕೆ.ಚಂದ್ರಣ್ಣ, ಟಿ.ಆರ್.ಚಿಕ್ಕರಂಗಣ್ಣ ಇತರರು ಇದ್ದರು.
ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಪುಣ್ಯಸ್ಮರಣೆ
Get real time updates directly on you device, subscribe now.
Prev Post
Next Post
Comments are closed.