ಬ್ಯಾಂಕ್ ಅವ್ಯವಸ್ಥೆಗೆ ಗ್ರಾಹಕರ ಆಕ್ರೋಶ

448

Get real time updates directly on you device, subscribe now.

ಮಧುಗಿರಿ: ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ಎಸ್ಬಿಐ ಶಾಖೆಯಲ್ಲಿ ಗ್ರಾಹಕರು ಹಣ ತುಂಬಲು ಚಲನ್ ಬ್ಯಾಂಕ್ನ ಹೊರಗಡೆ ನಿಂತು ಬರೆಯುವ ಪರಿಸ್ಥಿತಿ ಇದೆ.
ಕನಿಷ್ಟ ಸೌಜನ್ಯಕ್ಕಾದರೂ ಒಂದು ಟೇಬಲ್ ಹಾಕದೆ ಗೋಡೆಯ ಮೇಲೆ ಬರೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ, ಇಲ್ಲಿರುವ ಸೆಕ್ಯುರಿಟಿ ಗಾರ್ಡ್ಗಳು ಹದ್ದು ಮೀರಿ ವರ್ತಿಸುತ್ತಿದ್ದು, ಗ್ರಾಹಕರಿಂದ ಶಾಪಕ್ಕೆ ಒಳಗಾಗಿದ್ದಾರೆ, ಶಾಖಾ ವ್ಯವಸ್ಥಾಪಕರು ಗ್ರಾಹಕರಿಗೆ ಸರಿಯಾದ ವ್ಯವಸ್ಥೆ ಮಾಡದ ಹೊರತು ಈ ರೀತಿ ವರ್ತಿಸುವುದು ಸರಿಯಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಗ್ರಾಹಕರಿಂದ ಬ್ಯಾಂಕ್ ಹೊರತು ಬ್ಯಾಂಕ್ನಿಂದ ಗ್ರಾಹಕರಲ್ಲವೆಂದು ಅರಿಯಬೇಕಾಗಿದೆ, ಕೊರೊನಾ ಕಾರಣವೊಡ್ಡಿ ಇಲ್ಲಸಲ್ಲದ ಕಾನೂನುಗಳನ್ನು ಹೇರುವುದು ಎಷ್ಟು ಸರಿ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!