ತುಮಕೂರು: ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯ ಎಷ್ಟೇ ಬದಲಾವಣೆಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿದು ಮುಂದುವರೆದಿವೆ, ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ಅಲ್ಲಿಗೆ ಹೋಗಿಬಂದ ಅನೇಕರು ಹೇಳಿದ್ದಾರೆ, ಈ ನಂಬಿಕೆಯಿಂದಲೇ ಶಬರಿಮಲೆ ಕ್ಷೇತ್ರ ವಿಶ್ವ ವಿಖ್ಯಾತವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಗೋಕುಲ ಬಡಾವಣೆಯ ಶ್ರೀಅಯ್ಯಪ್ಪ ಸ್ವಾಮಿ ಭಕ್ತ ಬಳಗದಿಂದ ನಡೆದ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಭಜನಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರಿಗೆ ಈ ವೇಳೆ ಅಯ್ಯಪ್ಪ ಸ್ವಾಮಿ ಭಕ್ತಿ ಬಳಗ ಪ್ರದಾನ ಮಾಡಿದ ತುಮಕೂರು ದಸರಾ ಹಮ್ಮೀರಾ ಪ್ರಶಸ್ತಿ ಹಾಗೂ ಬೆಳ್ಳಿ ಖಡ್ಗ ಸ್ವೀಕರಿಸಿ ಮಾತನಾಡಿದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ಆಚರಣೆಯಾದ ದಸರಾ ಮಹೋತ್ಸವ ನಾವೆಲ್ಲಾ ಹೆಮ್ಮೆ ಪಡುವಂತಾದ್ದು, ಮುಂದಿನ ದಿನಗಳಲ್ಲೂ ವೈಭವದ ದಸರಾ ಮಹೋತ್ಸವ ಮುಂದುವರೆಯಲಿ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಯ್ಯಪ್ಪ ಭಕ್ತ ಬಳಗದ ಗೌರವಾಧ್ಯಕ್ಷ ಅಶೋಕ್, ಅಧ್ಯಕ್ಷ ಪ್ರತಾಪ್ ಮದಕರಿ, ಮುಖಂಡರಾದ ಪ್ರೇಮ್ ಕುಮಾರ್, ಗೋಪಾಲ ಜೆ.ಕೃಷ್ಣ, ಆರ್.ರಾಮಕೃಷ್ಣ, ವಾಲೆ ಚಂದ್ರಯ್ಯ ಮೊದಲಾದವರು ಭಾಗವಹಿಸಿದ್ದರು.
30ನೇ ವರ್ಷದ ಅಯ್ಯಪ್ಪಸ್ವಾಮಿ ಭಜನಾ ಮಹೋತ್ಸವದ ಅಂಗವಾಗಿವಿಶೇಷವಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಇರುವಂತೆ ಸತ್ಯವಾದ 18 ಮೆಟ್ಟಿಲುಗಳು ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿ, ಅಲಂಕೃತ ಮಂಟಪದಲ್ಲಿ ಅಯ್ಯಪ್ಪಸ್ವಾಮಿಯ ಪ್ರತಿಷ್ಠಾಪಿಸಿಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪಂಚಾಮೃತ ಅಭಿಷೇಕ, ಪಡಿಪೂಜೆ ಹರಿವರಾಸನಂ ಮತ್ತಿತರ ಪೂಜಾ ಕೈಂಕರ್ಯ ನೆರವೇರಿದವು.
ಆಚರಣೆಗಳಿಂದ ಸಂಸ್ಕೃತಿ, ಸಂಪ್ರದಾಯ ಉಳಿಯುತ್ತೆ
Get real time updates directly on you device, subscribe now.
Prev Post
Comments are closed.