ತುಮಕೂರು: ರಾಜ್ಯ ಸೇರಿದಂತೆ ದೇಶ ವಿದೇಶಗಳ ಮಟ್ಟದಲ್ಲಿ ತನ್ನದೇ ಆದ ರೀತಿಯಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಶ್ರೀಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆ ಜಿಲ್ಲೆಯ ಬಡಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಹೊಸ ವರ್ಷದಲ್ಲಿ ಹಲವು ಸೇವೆಗಳನ್ನು ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ನೀಡಲು ಮುಂದಾಗಿದೆ.
ಆಸ್ಪತ್ರೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ, ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಸೂಚನೆಯ ಮೇರೆಗೆ ಇದೀಗ 2025ರ ನೂತನ ಸಂವತ್ಸರದ ಜನವರಿ 16 ರಿಂದ ಹಲವು ಆರೋಗ್ಯ ಸೇವೆಗಳನ್ನ ಉಚಿತವಾಗಿ ದೊರಲಿವೆ, ಆರೋಗ್ಯ ತಪಾಸಣೆ, ಆಸ್ಪತ್ರೆಗೆ ದಾಖಲಾದ ಒಳ ರೋಗಿಗಳಗೆ ಉಚಿತ ಬೆಡ್ ಚಾರ್ಚ್, ಆಯ್ದ ರಕ್ತಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ, ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಪ್ರಭಾಕರ್ ತಿಳಿಸಿದ್ದಾರೆ.
ಸಾಹೇ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರ ಆಶಯದಂತೆ ತುಮಕೂರು ಜಿಲ್ಲೆ ಸೇರಿದಂತೆ ಇತರೆ ಪ್ರದೇಶದ ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವಾ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು ಉಚಿತ ಆರೋಗ್ಯ ತಪಾಸಣೆ, ಒಳ ರೋಗಿಗಳಿಗೆ ಉಚಿತ ಬೆಡ್ ವ್ಯವಸ್ಥೆ, ಆಯ್ದ ರಕ್ತ ಪರೀಕ್ಷೆಗಳು ಹಾಗೂ ಹೃದಯಕ್ಕೆ ಸಂಬಂಧಿಸಿದ ಸಿಟಿ ಸ್ಕ್ಯಾನ್, ಆಲ್ಟ್ರಾ ಸ್ಕ್ಯಾನ್, ಹೃದಯ ಶಸ್ತ್ರಚಿಕಿತ್ಸೆ ಮತ್ತು ಕಿಡ್ನಿಗೆ ಸಂಬಂಧಿಸಿದ ಕೆಲವು ಚಿಕಿತ್ಸೆಗಳನ್ನ ಕಡಿಮೆ ದರದಲ್ಲಿ ರೋಗಿಗಳಿಗೆ ದೊರಕಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಶ್ರೀಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯ ಸುಮಾರು 30 ವರ್ಷಗಳಿಂದ ಬಡ ಜನತೆಗೆ ಅನೇಕ ಆರೋಗ್ಯ ಸೌಲಭ್ಯ ನೀಡುತ್ತಾ ಬಂದಿದ್ದು ಇದರ ಜೊತೆಗೆ ಇನ್ನು ಹತ್ತು ಹಲವು ಆರೋಗ್ಯ ಸೌಲಭ್ಯಗಳನ್ನು ಬಡ ಜನರಿಗೆ ನೀಡಲು ಸಂಸ್ಥೆ ಮುಂದಾಗಿದೆ.
Comments are closed.