ಬರಗೂರು: ಭಕ್ತಿ ಶ್ರದ್ಧೆ ನಿಷ್ಠೆಯಿಂದ ವ್ರತಾಚರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದಲ್ಲಿ ಹೊಸ ಚೈತನ್ಯ ಕಾಣಬಹುದೆಂದು ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾರ್ಯದರ್ಶಿ ವೀರಭದ್ರ ಸ್ವಾಮಿ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರಿನ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ನಡೆದ 30ನೇ ವರ್ಷದ ಪಡಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಮಾಲೆ ಧರಿಸುವುದಲ್ಲ, 41 ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಶ್ರೀಅಯ್ಯಪ್ಪ ಸ್ವಾಮಿಯ ನಿರತರಾಗಿ ಪಾಲಿಸುವುದರಿಂದ ಮುಕ್ತಿ ದೊರೆಯಲು ಸಾಧ್ಯವಾಗುತ್ತದೆ, ಮಾಲೆ ಧರಿಸಿಕೊಂಡು ಶಬರಿಮಲೆ ಯಾತ್ರೆ ಮಾಡಿ ವ್ರತಾಚರಣೆ ಪೂರ್ಣಗೊಂಡ ನಂತರ ತಮ್ಮ ಜೀವನದಲ್ಲಿ ಏನನ್ನಾದರೂ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಸಿಗುತ್ತದೆ, ವ್ರತಾಚಾರಣೆಯಲ್ಲಿ ಕೈಗೊಂಡಂತ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ವೀರಭದ್ರ ಸ್ವಾಮಿ, ಖಜಾಂಚಿ ಹನುಮಂತರಾಯಪ್ಪ, ಸದಸ್ಯರಾದ ಭಗವಂತಪ್ಪ ಸ್ವಾಮಿ, ಬಿ.ಎಸ್. ನಾಗಭೂಷಣ್, ಕೆ.ಹನುಮಂತರಾಯಪ್ಪ, ರೇಣುಕಾ ಪ್ರಸಾದ್, ರಾಜಪ್ಪ, ಲೋಕೇಶ್ ಮತ್ತು ಭಕ್ತರು ಇದ್ದರು.
Comments are closed.