ಮೇ 4ರವರೆಗೆ ತುಮಕೂರು ಬಂದ್!

ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ

6,023

Get real time updates directly on you device, subscribe now.

ತುಮಕೂರು: ಜಗತ್ತಿನಾದ್ಯಂತ ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪರಸ್ಥರು ಮೇ.4 ರವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಶ್ವದೆಲ್ಲೆಡೆ ರಣಕೇಕೆ ಹಾಕುತ್ತಿರುವ ಈ ಕೊರೊನಾ ವೈರಸ್ ಸೋಂಕು ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ಚಾಚುತ್ತಾ ಸೋಂಕು ಹರಡಲು ಹವಣಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಿಎಚ್ ರಸ್ತೆ, ಎಂಜಿ ರಸ್ತೆ, ಎಸ್ಎಸ್ ಪುರಂ, ಅಶೋಕ ರಸ್ತೆ, ಮಂಡಿಪೇಟೆ ರಸ್ತೆ ಸೇರಿದಂತೆ ಹೆಚ್ಚು ವಹಿವಾಟು ನಡೆಯುವ ಪ್ರದೇಶದಲ್ಲಿ ಜನಸಂದಣಿ ಆಗಬಾರದೆಂದು ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದು ಪೊಲೀಸ್ ಪೇದೆಗಳು ಖುದ್ದು ಪ್ರಮುಖ ರಸ್ತೆಗಳಿಗೆ ಇಳಿದು ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ.
ಜನದಟ್ಟಣೆ ಜಾಸ್ತಿ ಇರುವ ಕಡೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜನಸಂಪರ್ಕ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಜನಸಾಮಾನ್ಯರೂ ಸಹ ಜನಸಂದಣಿಗೆ ಅವಕಾಶ ಕೊಡಬಾರದು, ಹೋಟೆಲ್ ಉದ್ಯಮಿಗಳು ಪಾರ್ಸಲ್‍ಗೆ ಅಷ್ಟೇ ಅವಕಾಶ ಕಲ್ಪಿಸಿದ್ದಾರೆ.
ಟೀ ಸ್ಟಾಲ್‍ಗಳು, ಜ್ಯೂಸ್ ಅಂಗಡಿಗಳು ತೆರೆಯದಂತೆ ಸೂಚನೆ ನೀಡಿದ್ದಾರೆ.
ಪ್ರತಿನಿತ್ಯ ಜಿಲ್ಲಾಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಸಾಕಷ್ಟು ಸೋಂಕಿತರು ಎಡತಾಕುತ್ತಿದ್ದಾರೆ. ಸರ್ಕಾರದ ಆದೇಶ ಅನ್ವಯ ಮೇ 4ರವರೆಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಜನರು ಗುಂಪಾಗಿ ನಿಲ್ಲುವುದು, ಟೋಕನ್‍ಗಾಗಿ ಕ್ಯೂ ನಿಲ್ಲುವುದನ್ನು ತಪ್ಪಿಸಲಾಗಿದೆ.
ನೆನ್ನೆ ಅತೀ ಹೆಚ್ಚು ಪ್ರಕರಣ: ಜಿಲ್ಲೆಯಲ್ಲಿ ನೆನ್ನೆ ಒಂದೇ 1,199 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಆರ್ ಟಿಪಿಸಿಆರ್ ನಲ್ಲಿ 24 ಗಂಟೆ ಹಿಂದಿನ ಟೆಸ್ಟ್ ಮಾಡಿದ ಪ್ರಕರಣಗಳಾಗಿದೆ, ನೆನ್ನೆ ತುಮಕೂರು ನಗರದಲ್ಲೇ 637 ಪ್ರಕರಣಗಳು ದೃಢಪಟ್ಟಿವೆ. ಇಂದು ಮತ್ತು ನಾಳೆ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ.
ಸಾಮಾಜಿಕ ಅಂತರ, ಮಾಸ್ಕ್ ಧರಿಸದಿದ್ದರೆ ದಂಡ ತೆತ್ತಬೇಕಾಗುತ್ತದೆ. ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ನೀಡಿರುವ ಶಿಸ್ತುಕ್ರಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.

ಸತತವಾಗಿ 14 ದಿನಗಳ ಕಾಲ ರಾತ್ರಿ ವೇಳೆ ನೈಟ್ ಕರ್ಫ್ಯೂ ಜಿಲ್ಲೆಯಲ್ಲಿ ಜಾರಿಯಾಗಿದೆ, ವ್ಯಾಪಾರಿ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ದಿನ ನಿತ್ಯ ಬಳಕೆಗೆ ಬೇಕಾದ ಆಹಾರ ಪದಾರ್ಥಗಳಿಗೆ, ಹಾಲು, ಹೂ, ಹಣ್ಣು, ಮೆಡಿಕಲ್ ಶಾಪ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ತೆರೆಯಲಿದ್ದು ಪಾರ್ಸೆಲ್ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ, ಮದ್ಯ ಖರೀದಿಗೆ ಅವಕಾಶವಿದೆ. ಬಾರ್ ರೆಸ್ಟೋರೆಂಟ್ ಗೆ ಅವಕಾಶವಿಲ್ಲ. ಶನಿವಾರ ಮತ್ತು ಭಾನುವಾರ ಕೇವಲ ನಾಲ್ಕು ಗಂಟೆ ಮಾತ್ರ ಅವಶ್ಯಕತೆಗೆ ಬೇಕಾದ ಮಳಿಗೆ ತೆರೆಯಲು ಸೂಚನೆ ನೀಡಲಾಗಿದೆ.
ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಕಳೆದ ಮೂರು ದಿನಗಳಲ್ಲಿ 21 ಜನರ ವಿರುದ್ಧ ಕೇಸು ದಾಖಲಿಸಲಾಗಿದೆ.

ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Get real time updates directly on you device, subscribe now.

Comments are closed.

error: Content is protected !!