ಮಧುಗಿರಿ: ಶಾಲೆಯಿಂದ ವಾಪಸ್ ಮನೆಗೆ ತೆರಳುವಾಗ ನಾಯಿಯೊಂದು ಬಾಲಕಿಯ ಮೇಲೆ ದಾಳಿ ಮಾಡಿದೆ.
ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪ ಇರುವ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿನ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಯೊಬ್ಬಳು ಸಂಜೆ ಮನೆಗೆ ತೆರಳುವಾಗ ನಾಯಿ ಯೊಂದು ಆಕೆಯ ಮೇಲೆ ದಾಳಿ ಮಾಡಿದ್ದು ವಿದ್ಯಾರ್ಥಿನಿಯ ಬಟ್ಟೆ ಹರಿದು ಹಾಕುವಾಗ ಸಾಮಾಜಿಕ ಕಾರ್ಯಕರ್ತರೊಬ್ಬರು ಗಮನಿಸಿ ವಿದ್ಯಾರ್ಥಿನಿಯನ್ನು ದಾಳಿಯಿಂದ ತಪ್ಪಿಸಿದ್ದು, ಬಹುದಾದ ಹೆಚ್ಚಿನ ಅನಾಹುತ ತಪ್ಪಿದೆ, ವಿದ್ಯಾರ್ಥಿನಿಗೆ ಯಾವುದೇ ರಕ್ತ ಗಾಯಗಳಾಗಿಲ್ಲ ವೆಂದಿದ್ದಾರೆ.
ಪಟ್ಟಣದ ಕೆಲ ಭಾಗಗಳಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ದಾರಿ ಹೋಕರು ಹಾಗೂ ದ್ವಿ ಚಕ್ರ ವಾಹನ ಸವಾರ ಮೇಲೆ ಆಗಾಗ ದಾಳಿ ನಡೆಯುತ್ತಿವೆ, ನಾಯಿಗಳ ನಿಯಂತ್ರಣಕ್ಕೆ ಪುರಸಭೆ ಹಾಗೂ ಪಶು ಇಲಾಖೆಯ ಸಿಬ್ಬಂದಿ ಮುಂದಾಗುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಬಾಲಕಿ ಮೇಲೆ ನಾಯಿ ದಾಳಿ
Get real time updates directly on you device, subscribe now.
Prev Post
Next Post
Comments are closed.