ಶಿಕ್ಷಣದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

2

Get real time updates directly on you device, subscribe now.


ತುಮಕೂರು: ನೀವು ಇತರರೊಂದಿಗೆ ನಡೆಸುವ ಸಂಹನವು ನಿಮ್ಮ ಜ್ಞಾನವನ್ನು ತಾನಾಗಿಯೇ ಹೆಚ್ಚಿಸುತ್ತದೆ, ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ಸರಿಯಾದ ಪರಿಹಾರವಾಗಿದೆ ಎಂದು ಮಥುರಾದ ಜಿಎಲ್ಎ ವಿಶ್ವ ವಿದ್ಯಾಲಯದ ಸಮಕುಲಾಧಿಪತಿ ಪ್ರೊ.ಡಿ.ಎಸ್.ಚೌಹಾಣ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಮತ್ತು ಕೌಶಲ್ಯ ಅಭಿವೃದ್ಧಿ ಕೋಶದ ವತಿಯಿಂದ ಗುರುವಾರ ಆಯೋಜಿಸಿದ್ದ ಸುಭಾಶ್ ಚಂದ್ರ ಬೋಸರ ಮೇಲೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಭಾವ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ಬದುಕುಳಿದಿದ್ದು ಕೆಲವೇ ವರ್ಷಗಳು, ಆದರೆ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ, ಅವರು ಅನಂತ ಜ್ಞಾನವೇ ಆಗಿದ್ದರು ಎಂದ ಪ್ರೊ.ಚೌಹಾಣ್, ಸ್ವರ್ಗ ಆಕಾಶದಲ್ಲಿಲ್ಲ, ಮುಂಬರುವಯುವ ಪೀಳಿಗೆಯಲ್ಲಿದೆ ಎಂಬ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಂಡರು.

ಆಂಧ್ರ ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ಶಾಖೆಯ ನಿವೃತ್ತ ನಿರ್ದೇಶಕ ಪ್ರೊ.ಜಿ. ಎಸ್.ಮೂರ್ತಿ ಮಾತನಾಡಿ, ಒಂದು ಕಲ್ಲು ಹೇಗೆ ತನ್ನಅನಗತ್ಯ ಅಂಶಗಳನ್ನು ಕಳೆದು ಶಿಲೆಯಾಗುವುದೋ ಹಾಗೆಯೇ ಒಬ್ಬ ವ್ಯಕ್ತಿ ಅನಗತ್ಯ ವಿಚಾರಗಳನ್ನು ತೊರೆದು ಉತ್ತಮ ವ್ಯಕ್ತಿ ಆಗಬೇಕು ಎಂದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಹಿಂದಿನ ಶತಮಾನದಲ್ಲಿ ಹುಟ್ಟಿದ ಕೆಲವು ದೇಶ ಪ್ರೇಮಿಗಳು ದೇಶಕ್ಕೋಸ್ಕರ ಪ್ರಾಣಕೊಟ್ಟರು, ಆದರೆ ಈಗ ಪ್ರಾಣವನ್ನು ಅನಗತ್ಯ ಮೂರ್ಖ ವಿಚಾರಗಳಿಗೆ ಕೊಡುತ್ತಿದ್ದಾರೆ ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ವಿವೇಕಾನಂದ ಪೀಠದ ಸಂಯೋಜಕ ಡಾ.ಚೇತನ್ ಪ್ರತಾಪ್.ಕೆ.ಎನ್. ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!