ಮಾರಮ್ಮ ದೇವಿ ಉತ್ಸವಕ್ಕೆ ಚೋಳೇನಹಳ್ಳಿ ಕೆರೆ ಸಜ್ಜು

2

Get real time updates directly on you device, subscribe now.


ಮಧುಗಿರಿ: ಪೂರ್ವಜರ ಕಾಲದಿಂದಲೂ ನಡೆಯುತ್ತಿರುವ ದಂಡಿನಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ 50 ವರ್ಷದ ನಂತರ ಮೊಟ್ಟ ಮೊದಲ ಬಾರಿಗೆ ಜ24 ರಂದು ಚೋಳೇನಹಳ್ಳಿ ಕೆರೆಯಲ್ಲಿ ವಿಜೃಂಭಣೆಯ ತೆಪ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಚೋಳೇನಹಳ್ಳಿ ಕೆರೆಯಂಗಳದಲ್ಲಿ ನಡೆದ ದಂಡಿನ ಮಾರಮ್ಮ ತೆಪ್ಪೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಪಟ್ಟಣಕ್ಕೆ ನೀರು ಒದಗಿಸುವ ಚೋಳೇನಹಳ್ಳಿ ಕೆರೆ ತುಂಬಿದಾಗ ತೆಪ್ಪೋತ್ಸವ ಮಾಡಲಾಗುತಿತ್ತು, ಕಾರಣಾಂತರಗಳಿಂದ ಕಳೆದ 50 ವರ್ಷದ ಹಿಂದೆ ಸ್ಥಗಿತವಾಗಿತ್ತು, ಇದೀಗಾ ಕೆರೆ ತುಂಬಿದ್ದು ಪಣ್ಣೆ ರೈತರ ಒತ್ತಾಸೆಯ ಮೇರೆಗೆ ಹಾಗೂ ಕ್ಷೇತ್ರದ ನೆಮ್ಮದಿ, ಅಭಿವೃದ್ಧಿಗಾಗಿ ಎಂಎಲ್ ಸಿ ಆರ್.ರಾಜೇಂದ್ರ ನೇತೃತ್ವದ ತಂಡ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿದೆ, ರಾಜ್ಯದಲ್ಲೇ ಇದೇ ಮೊದಲು ಬಾರಿ ಇಂತಹ ತೆಪ್ರೋತ್ಸವ ಮಾಡಲಾಗುತ್ತಿದ್ದು ಮೈಸೂರು ದಸಾರ ಹಾಗೂ ಹಾಸನದ ಹಾಸನಾಂಬೆ ದೇವಿಯ ಉತ್ಸವದ ಮಾದರಿಯಲ್ಲಿ ಈ ಬಾರಿ ಮಧುಗಿರಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.

ಆರ್.ರಾಜೇಂದ್ರ ಮಾತನಾಡಿ, 1972 ರಲ್ಲಿ ನಡೆದಿದ್ದು ತೆಪ್ಪೋತ್ಸವ ನಂತರ ನಡೆದಿರಲಿಲ್ಲ ಇದೀಗಾ ತೆಪ್ಪೋತ್ಸಕ್ಕೆ ಸಿದ್ಧತೆ ಮಾಡಲಾಗಿದೆ, ಕೆರೆಯಲ್ಲಿ ತೆಪ್ಪ ಮಾಡಿ ಅದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸುಮಾರು 12 ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ, ಸುಮಾರು 25 ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದರು.

ಸಾರ್ವಜನಿಕರನ್ನು ತೆಪ್ಪೋತ್ಸವ ವೀಕ್ಷಣೆ ಮಾಡಲು ಸಿದ್ಧತೆ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಿದ್ಧಗಂಗಾ ಮಠದ ಅಧ್ಯಕ್ಷ ಡಾ.ಸಿದ್ಧಲಿಂಗ ಸ್ವಾಮೀಜಿ, ಚಲನ ಚಿತ್ರ ನಿರ್ದೇಶಕ ರವಿ ಆರ್ ಗರಣಿ ಹಾಗೂ ವಿವಿಧ ಶಾಸಕರು ಸಚಿವರು ಆಗಮಿಸಲಿದ್ದಾರೆ, 500 ರಿಂದ 600 ಪೊಲೀಸರು ನಿಯೋಜನೆ, ಮಧ್ಯಾಹ್ನ ಊಟ ನಾಲ್ಕು ಕೌಂಟರ್ ನಲ್ಲಿ ಲಾಡು ವಿತರಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೂಟೂರು ಶಿವಪ್ಪ, ಮಾಜಿ ಸಚಿವ ವೆಂಕಟರವಣಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಮಾಜಿ ಜಿಪಂ ಸದಸ್ಯ ನಾರಾಯಣಪ್ಪ, ಮುಖಂಡರಾದ ವಿ.ಆರ್.ಭಾಸ್ಕರ್, ತಿಮ್ಮರಾಯಪ್ಪ, ತುಂಗೋಟಿ ರಾಮಣ್ಣ.ಎಂ, ಎನ್.ನಂಜುಂಡಪ್ಪ, ಜಗದೀಶ್, ಪುರಸಭೆ ಸದಸ್ಯ ಶ್ರೀಧರ್, ಮಂಜುನಾಥ್ ಆಚಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!