ಗದ್ದೆಗಳಿಗೆ ಕೊಳಚೆ ನೀರು ನುಗ್ಗದಂತೆ ತಪ್ಪಿಸಿ

3

Get real time updates directly on you device, subscribe now.


ತುಮಕೂರು: ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆಯ ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಶ್ರೀರಂಗಪಟ್ಟಣ, ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ಮತ್ತು ಚಿಕ್ಕವೀರಯ್ಯನಪಾಳ್ಯ, ಅರಳೀಮರದ ಪಾಳ್ಯದ ನಿವಾಸಿಗಳು ಪುಟ್ಟಸ್ವಾಮಯ್ಯನ ಪಾಳ್ಯ, ಚಾಮುಂಡೇಶ್ವರಿ ನಗರದ ಚರಂಡಿ ನೀರು ಅಮಾನಿಕೆರೆ ದೊಡ್ಡಕೋಡಿ ಮುಖಂತರ ಎಸ್.ಮಾಲ್ ಪಕ್ಕದ ದೊಡ್ಡಚರಂಡಿ ಮುಖಾಂತರ ಹರಿದು ಬರುವ ಕೊಳಚೆ ನೀರು ರೈತರ ಹೊಲ ಗದ್ದೆಗಳಿಗೆ ನುಗ್ಗುತ್ತಿದ್ದು ಇದನ್ನೂ ಸರಿಪಡಿಸಲು ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ತುಮಕೂರು ನಗರ ಶಾಸಕ ಬಿ.ಜಿ.ಜ್ಯೋತಿಗಣೇಶ್ ಅವರಿಗೆ ಇಲ್ಲಿನ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು.

ತುಮಕೂರು ಅಮಾನಿಕೆರೆ ಹಿಂಭಾಗದ ರೈತ- ನಾಗರಿಕ ಹೋರಾಟ ಸಮಿತಿಯ ಸದಸ್ಯರು ಮತ್ತು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಶಾಸಕ ಬಿ.ಜಿ.ಜ್ಯೋತಿಗಣೇಶ್ ಅವರನ್ನು ಭೇಟಿ ಮಾಡಿ ಚಿಕ್ಕಪೇಟೆಯ ಗಾರ್ಡನ್ ರಸ್ತೆಯಲ್ಲಿ ಮಳೆ ಬಂದಾಗ ಕಲುಷಿತ ನೀರು ಸಂಗ್ರಹವಾಗಿ ನರಕಯಾತನೆ ಪಡುವ ಸ್ಥಿತಿ ಇದ್ದು ಹಾಗೂ ಇದೇ ಭಾಗದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ಇದೆ, ಸಮಸ್ಯೆ ಇತ್ಯರ್ಥ ಪಡಿಸುವಂತೆ ತುಮಕೂರು ಮಹಾ ನಗರ ಪಾಲಿಕೆಗೆ ಮತ್ತು ತುಮಕೂರು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನಿವಿ ಸಲ್ಲಿಸಿದರು, ಸಹ ಕೇವಲ ಭರವಸೆ ಮಾತ್ರ ನೀಡಿ ಸಮಸ್ಯೆ ಇದುವರೆಗೂ ಬಗೆಹರಿಸಿಲ್ಲ ಮತ್ತು ಶ್ರೀರಂಗಪಟ್ಟಣ ನೊಂದ ರೈತ- ನಾಗರಿಕರ ಹೋರಾಟ ಸಮಿತಿ ಸಮಸ್ಯೆ ಇತ್ಯರ್ಥ ಪಡಿಸಲು ಜಿಲ್ಲಾಡಳಿತ ತಕ್ಷಣವೇ ಮಧ್ಯ ಪ್ರವೆಶಿಸಿ ಸಮಸ್ಯೆ ನಿವಾರಿಸಬೇಕು ಮತ್ತು ಪುಟ್ಟಸ್ವಾಮಯ್ಯನ ಪಾಳ್ಯದ ಭಾಗದಿಂದ ಹರಿದು ಬರುವ ಚರಂಡಿ ನೀರು ಸರಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಾರಣ ನೀರು ರೈತರ ಗದ್ದೆಗಳಿಗೆ ನುಗ್ಗುತ್ತಿದ್ದು ವ್ಯವಸಾಯ ಮಾಡಲು ಕಷ್ಟಕರವಾಗುತ್ತಿದೆ, ದನ-ಕರುಗಳನ್ನು ಮೇಯಿಸಲು ಸಹ ಕಷ್ಟವಾಗಿದೆ.

ತುಮಕೂರು ಅಮಾನಿಕೆರೆಯಿಂದ ಪ್ರಾರಂಭವಾಗುವ (ರಾಯಗಾಲುವೆ) ದೊಡ್ಡ ಚರಂಡಿ ಕಾಮಗಾರಿ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತು ಸುಮಾರು ವರ್ಷಗಳೇ ಕಳೆದಿವೆ, ಈ ದೊಡ್ಡ ಚರಂಡಿ ಮತ್ತು ಪುಟ್ಟಸ್ವಾಮಯ್ಯನ ಪಾಳ್ಯ, ಚಾಮುಂಡೇಶ್ವರಿ ನಗರ, ಶಿರಾಗೇಟ್ನ ಭಾಗದಿಂದ ಹರಿದು ಬರುವ ಚರಂಡಿಯ ನೀರು ಸಹ ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಹೊಂದುತ್ತದೆ, ಭೀಮಸಂದ್ರ ಕೆರೆಗೆ ಸಂಪರ್ಕ ಹೊಂದುವ ಈ ಎರಡು ಚರಂಡಿ ಅಧರ್ಕ್ಕೆ ನಿಂತು ಹಲವು ವರ್ಷಗಳೆ ಕಳೆದರೂ ಸಹ ಇದುವರೆಗೂ ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಗಮನಹರಿಸಿಲ್ಲ, ಹಲವು ಬಾರಿ ಮನವಿ ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರಿಗೆ ಇಲ್ಲಿನ ನಿವಾಸಿಗಳು ಮನವರಿಕೆ ಮಾಡಿಕೊಟ್ಟರು.
ಮಳೆ ಬಂದಾಗ ಕೊಳಚೆ ನೀರು ಸರಗವಾಗಿ ಹರಿಯಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೆ ಇಲ್ಲಿನ ಹೊಲ ಗದ್ದೆಗಳಿಗೆ ಪ್ಲಾಸ್ಟಿಕ್, ಕಸಕಡ್ಡಿ ಕಲುಷಿತ ನೀರು, ಯುಜಿಡಿ ನೀರು ಸೇರಿ ವಾಸನೆ ಬರುವುದರಿಂದ ಇಲ್ಲಿನ ಜನರು ವಾಸ ಮಾಡುವುದೇ ಕಷ್ಟವಾಗಿದ್ದು ಶಾಸಕರು ಈ ಎರಡು ಭಾಗದ ರೈತ ನಾಗರೀಕರ ಸಮಸ್ಯೆ ಬಗೆಹರಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಸಮಸ್ಯೆಯ ಇತ್ಯರ್ಥಕ್ಕೆ ಶಾಸಕರು ಗಮನಹರಿಸಿ ಬಗೆಹರಿಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮೀ ನರಸಿಂಹರಾಜು, ಇಂದ್ರಕುಮಾರ್, ಮಹೇಶ್ ಮತ್ತು ತುಮಕೂರು ಅಮಾನಿಕೆರೆ ಹಿಂಭಾಗದ ರೈತ- ನಾಗರಿಕ ಹೋರಾಟ ಸಮಿತಿ ಸಂಚಾಲಕ ಟಿ.ಹೆಚ್.ರಾಮು, ಸಿದ್ದರಾಜು, ಜಗದೀಶ್, ರಂಗಸ್ವಾಮಯ್ಯ, ರಂಗನಾಥ್, ನವೀನ್, ಮಂಜುನಾಥ್, ನಾಗರಾಜು, ಗಂಗಣ್ಣ, ಹೊನ್ನಗಂಗಯ್ಯ, ಟಿ.ಜಿ.ಕುಮಾರ್, ಬಸವರಾಜು, ರಂಗಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!