ಶಿರಾ: ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಿದ್ದು, ತಂದೆ ತಾಯಿಯಂದಿರು ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದಂತೆ ಎಚ್ಚರವಹಿಸಬೇಕು, ಮಾತೆ, ಮಡದಿಯಂತೆ ಕುಟುಂಬದಲ್ಲಿ ಹೆಣ್ಣು ಮಗುವಿಗೂ ಉತ್ತಮ ಸ್ಥಾನ ನೀಡಿ ಗೌರವಿಸುವಂತಹ ಕೆಲಸ ಮಾಡಬೇಕು, ಹೆಣ್ಣೆಂಬ ಕೀಳರಿಮೆ ಮಾಡಬಾರದು ಎಂದು ವೈದ್ಯಾಧಿಕಾರಿ ಡಾ.ಕೆ.ಜೆ. ತಿಮ್ಮರಾಜು ಹೇಳಿದರು.
ಶಿರಾ ತಾಲೂಕಿನ ದ್ವಾರನ ಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಪೋಷಕರು ಶಿಕ್ಷಣ ವಂಚಿತರನ್ನಾಗಿ ಮಾಡಬಾರದು, ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಿದರೆ ಸಮಾಜದಲ್ಲಿ ಅತಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಲಿದೆ, ತಂದೆ ತಾಯಿಗಳು ಪ್ರೋತ್ಸಾಹಿಸಿದರೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಭಾವನೆಯೊಂದಿಗೆ ಹೆಣ್ಣು ಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸಿದಾಗ ಮಾತ್ರ ಹೆಣ್ಣು ಪರಿಪೂರ್ಣ ಮಹಿಳೆಯಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ, ಬಾಲ್ಯ ವಿವಾಹ ಯಾವುದೇ ಕಾರಣಕ್ಕೂ ಮಾಡಬಾರದು ಎಂದರು.
ಕಾಳಿದಾಸ ಪ್ರೌಢಶಾಲೆಯ ಶಿಕ್ಷಕ ರಂಗನಾಥ್, ಆರೋಗ್ಯ ಇಲಾಖೆಯ ಕವಿತ, ನಿರಂಜನ್, ರೋಜ, ರಘು, ವಿಜಯಲಕ್ಷ್ಮಿ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Comments are closed.