ಕುಣಿಗಲ್: ಹಾಡ ಹಗಲೇ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕಳ ಮೇಲೆ ಏಕಾಏಕಿ ರಾಡ್ ನಿಂದಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳೇ ದೇವಾಲಯದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಶ್ವೇತ.ಎಂ. ಎಂದು ಗುರುತಿಸಲಾಗಿದೆ, ಈಕೆ ಕಳೆದ ಕೆಲ ದಿನಗಳ ಹಿಂದೆ ಬಿಳೇದೇವಾಲಯದ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿನ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು, ಎಂದಿನಂತೆ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಆಗಮಿಸಿ ರೇಷ್ಮೆ ಮೊಟ್ಟೆಗಳ ಪರಿಶೀಲನೆ ಮಾಡುವ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿ ರಾಡ್ನಿಂದ ಏಕಾಏಕಿ ಹಲ್ಲೆ ನಡೆಸಿ, ಆಕೆ ಧರಿಸಿದ್ದ ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ, ಗಾಯಾಳು ಕರಿಮಣ ಸರ ಕೀಳಬೇಡ ಎಂದು ಬೇಡಿಕೊಂಡರೂ ಬಿಡದೆ ಕರಿಮಣಿ ಸರವನ್ನು ತುಂಡರಿಸಿ ಹಲ್ಲೆಗೆ ಯತ್ನಿಸಿದಾಗ ಗಾಯಾಳು ಹಲ್ಲೆಕೋರ ಧರಿಸಿದ್ದ ಮುಖಗವಸು ಕಿತ್ತು ಪ್ರತಿರೋಧ ವ್ಯಕ್ತಪಡಿಸಿದ್ದು ಗಾಬರಿಗೊಂಡ ಹಲ್ಲೆಕೋರ ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿ ಅಲ್ಲಿಂದ ಹೊರಟನೆಂದು ಗಾಯಾಳು ತಿಳಿಸಿದ್ದು, ಸದರಿ ಹಲ್ಲೆಕೋರನು ಇದೆ ಪ್ರದೇಶಕ್ಕೆ ಮೂರ್ನಾಲ್ಕು ಬಾರಿ ಬಂದಿದ್ದನೆಂದು ಸಹ ಹೇಳಲಾಗಿದೆ, ಗಾಯಾಳು ಸಹೋದ್ಯೋಗಿಗಳಿಗೆ ದೂರವಾಣಿ ಕರೆ ಮಾಡಿ ಘಟನೆ ತಿಳಿಸಿದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುವಿನ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ, ದರೋಡೆಗೆ ಯತ್ನಿಸಿದವನ ಪತ್ತೆಗೆ ಮುಂದಾಗಿದ್ದಾರೆ, ಜನವರಿ 5 ರಂದು ಲಕ್ಷ್ಮೀಪುರ ಗ್ರಾಮದಲ್ಲೂ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ್ದ ದರೋಡೆಕೋರ ಗೃಹಿಣಿಯ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಚಿನ್ನದ ಮಾಂಗಲ್ಯಸರ ದೋಚಿ ಪರಾರಿಯಾಗಿದ್ದ, ಘಟನೆ ಸಂಬಂಧ ಹಲ್ಲೆ ಕೋರನ ಪತ್ತೆಗೆ ಪೊಲೀಸರು ಇನ್ನು ಪ್ರಯತ್ನ ನಡೆಸಿರುವ ಹಂತದಲ್ಲೆ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಆಭರಣ ದೋಚುವ ಮತ್ತೊಂದು ದರೋಡೆ ಯತ್ನ ನಡೆದಿದೆ, 22 ದಿನದ ಅಂತರದಲ್ಲಿ ಎರಡನೇ ದರೋಡೆ ಪ್ರಕರಣ ಇದಾಗಿದೆ.
Get real time updates directly on you device, subscribe now.
Prev Post
Next Post
Comments are closed.