ರಸ್ತೆ ಒತ್ತವರಿಯಾಗಿದ್ದ ಅಂಗಡಿಗಳ ತೆರವು

ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ

608

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿಎಚ್ ರಸ್ತೆಯ ಬದಿಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಮುಂದಾಗಿದ್ದು. ಮುಖ್ಯಾಧಿಕಾರಿಗಳ ಆದೇಶಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಪಟ್ಟಣದ ತಾಲೂಕು ಕಚೇರಿಯಿಂದ ಹಿಡಿದು ಹುಳಿಯಾರ್ ಗೇಟ್ ಹೊರಗೆ ನೂರಾರು ಅಂಗಡಿಗಳು ಪುಟ್ ಪಾತ್ ಅನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ರಸ್ತೆ ಅಗಲೀಕರಣ ಆದ ಕಾರಣ ಸಾರ್ವಜನಿಕರಿಗೆ ಓಡಾಡಲು ಪುಟ್ಬಾತ್ ಇಲ್ಲವಾಗಿತ್ತು, ಅಪಘಾತಕ್ಕೆ ಎಡೆ ಮಾಡಿಕೊಟ್ಟಂತೆ ಇದ್ದ ಅಂಗಡಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಪುರಸಭೆ ಮುಖ್ಯಾಧಿಕಾರಿಗಳು ಮುಂದೆ ನಿಂತು ಅಂಗಡಿಗಳನ್ನು ತೆರವು ಮಾಡಿಸುತ್ತಿದ್ದಾರೆ.
ಅನೇಕ ಬಾರಿ ರಸ್ತೆ ಬದಿಗಳಲ್ಲಿ ಅಂಗಡಿಗಳಿಗೆ ನೋಟಿಸ್ ನೀಡಿದರು ಸಹ ಅಂಗಡಿಗಳನ್ನು ತೆರವು ಮಾಡದ ಕಾರಣ ಪುರಸಭೆಯೇ ಮುಂದೆನಿಂತು ಪುರಸಭೆ ನೌಕರರಿಂದ ಅಂಗಡಿಗಳನ್ನು ತೆರವು ಮಾಡಿಸಲಾಗುತ್ತಿದೆ. ರಸ್ತೆ ಅಗಲವಾಗಿರುವುದರಿಂದ ಫುಟ್ಪಾತ್ ನಲ್ಲಿ ಸಾರ್ವಜನಿಕರು ಓಡಾಡಲು ಅನಿವಾರ್ಯವಾಗಿರುತ್ತದೆ ಆದರೆ ಫುಟ್ಪಾತ್ ಅನ್ನು ಆಕ್ರಮಿಸಿಕೊಂಡು ಕೆಲವರು ಅಂಗಡಿಗಳನ್ನು ಹಾಕಿಕೊಂಡಿದ್ದರು ಅಂತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಶ್ರೀನಿವಾಸ್, ಮುಖ್ಯಾಧಿಕಾರಿಗಳು, ಚಿಕ್ಕನಾಯಕನಹಳ್ಳಿ

ಅನೇಕ ವರ್ಷಗಳಿಂದ ಫುಟ್ಪಾತ್ ಪದ್ಯ ಅಂಗಡಿಗಳನ್ನು ತೆರವುಗೊಳಿಸಲು ಆಗ್ರಹಿಸಲಾಗಿತ್ತು ಆದರೆ ಇಷ್ಟು ವರ್ಷವಾದರೂ ತೆರವು ಕಾರ್ಯ ನಡೆದಿರಲಿಲ್ಲ. ಮುಖ್ಯ ಅಧಿಕಾರಿಗಳು ಈ ಕೆಲಸಕ್ಕೆ ಕೈ ಹಾಕಿದ್ದುದನ್ನು ಸ್ವಾಗತಿಸುತ್ತ. ಈ ಅಂಗಡಿಗಳಲ್ಲಿ ಅನೇಕರು ಬಡವರು ಇದ್ದು ಅಂಥವರ ಹಿತಾಸಕ್ತಿಯನ್ನು ಕಾಯಬೇಕೆಂದು ಪುರಸಭೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಲಿಂಗದೇವರು, ದಲಿತ ಮುಖಂಡ, ಚಿಕ್ಕನಾಯಕನಹಳ್ಳಿ

Get real time updates directly on you device, subscribe now.

Comments are closed.

error: Content is protected !!