ಮಕ್ಕಳಲ್ಲಿ ಮಾನವೀಯ ಗುಣ ಬೆಳೆಸಿ: ನಟ ರಮೇಶ್

7

Get real time updates directly on you device, subscribe now.


ಗುಬ್ಬಿ: ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ನೀಡದೆ ಅವರ ಆಸಕ್ತಿಗೆ ತಕ್ಕ ಹಾಗೆ ವಿದ್ಯೆ ನೀಡಿ ಎಂದು ಚಲನ ಚಿತ್ರನಟ ಡಾ.ರಮೇಶ್ ಅರವಿಂದ್ ತಿಳಿಸಿದರು.

ತಾಲ್ಲೂಕಿನ ಕಡಬ ಹೋಬಳಿಯ ಎಲೈಟ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಎಲೈಟ್ ವಿದ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಮಕ್ಕಳ ಜೊತೆಗೆ ಪೋಷಕರು ಹೆಚ್ಚಿನ ಸಮಯ ಕಳೆಯಲು ಪ್ರಯತ್ನ ಮಾಡಿ, ಇದರಿಂದ ಅವರೇ ನಿಮ್ಮನ್ನ ಪ್ರೀತಿ ಮಾಡುತ್ತಾರೆ, ಯಾವುದೇ ಕ್ಷೇತ್ರದಲ್ಲಿ ಅವರು ಬೆಳೆಯುತ್ತಾರೆ ಎಂದರೆ ಆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದಾಗ ಖಂಡಿತವಾಗಿ ಅವರು ಯಶಸ್ವಿ ವಿದ್ಯಾರ್ಥಿಗಳಾಗುತ್ತಾರೆ, ನಿಮ್ಮ ಮಕ್ಕಳ ಮುಂದೆ ನೀವು ಸಮಯಕ್ಕೆ ಬೆಲೆ ನೀಡಿ, ನಿಮ್ಮ ಆತ್ಮ ಸಾಕ್ಷಿಯಂತೆ ನೀವು ನಡೆದು ಕೊಂಡಾಗ ಅವರು ನಿಮ್ಮನ್ನ ಅನುಸರಿಸಿ ಮುಂದಿನ ಬದುಕಲ್ಲಿ ಅವರು ಉತ್ತಮ ಬದುಕು ಕಟ್ಟಿ ಕೊಳ್ಳುತ್ತಾರೆ ಎಂದು ತಿಳಿಸಿದರು.

ಶಾಲೆಯ ಅಧ್ಯಕ್ಷ ಬಿ.ವಿ.ವಸಂತ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿಯೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ನೀಡುವ ಮೂಲಕ ಪ್ರತಿಯೊಂದು ಮಕ್ಕಳಿಗೂ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿರುವ ಪ್ರತಿಭೆ ಹೊರ ಹಾಕುವ ಕೆಲಸ ಮಾಡುತ್ತಿದ್ದೇವೆ, ಇಲ್ಲಿ ಓದುವ ಪ್ರತಿ ವಿದ್ಯಾರ್ಥಿಯು ತನ್ನದೇ ಆದ ಕೌಶಲ್ಯತೆ ಹೊಂದಬೇಕು, ಆಗ ಮಾತ್ರ ಅವರಿಗೆ ಶಿಕ್ಷಣದ ಮಹತ್ವ ತಿಳಿಯುತ್ತದೆ ಎಂಬುದನ್ನು ಅರಿತು ಇಲ್ಲಿನ ಆಡಳಿತ ಮಂಡಳಿ ಶಿಕ್ಷಕ ವರ್ಗ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಶಾಲೆಯ ಕಾರ್ಯದರ್ಶಿ ಕುಮುದ ಮಣಿ, ಪ್ರಿನ್ಸಿಪಾಲ್ ಫಿಲಿಪ್ ಥಾಮಸ್ ಸೇರಿದಂತೆ ಆಡಳಿತ ವರ್ಗ, ಸಿಬ್ಬಂದಿ, ಪೋಷಕರು, ಮಕ್ಕಳು ಇನ್ನಿತರರರು ಇದ್ದರು.

Get real time updates directly on you device, subscribe now.

Comments are closed.

error: Content is protected !!