ಗುಬ್ಬಿ: ಪಟ್ಟಣದಲ್ಲಿ ಕೊರೊನಾ ನಿಯಮದ ಅನುಸಾರ ಇಂದಿನಿಂದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಅಗತ್ಯ ಹಾಗೂ ತುರ್ತು ಸೇವಾ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಹೋಟೆಲ್ ಮತ್ತು ಬೇಕರಿಗಳಲ್ಲಿ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟು, ಎಲ್ಲೂ ಜನಜಂಗುಳಿ ಆಗದಂತೆ ವ್ಯವಸ್ಥೆ ಮಾಡಲಾಗಿದೆ, ಪ್ರಾರಂಭದಲ್ಲಿ ಜನರು ವಿರೋಧ ವ್ಯಕ್ತಪಡಿಸಿದರೂ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದುದ್ದರಿಂದ, ನಂತರ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚುತ್ತಾ ಹೋದರು. ಹಳ್ಳಿಗಳಿಂದ ಪಟ್ಟಣಕ್ಕೆ ಖರೀದಿಗಾಗಿ ಬಂದಿದ್ದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ
ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೇಸ್ ಗಳು ಬರುತ್ತಿದ್ದು ಇವುಗಳನ್ನು ಕಂಟ್ರೋಲ್ ಮಾಡಲೇಬೇಕು ಎಂದರೆ ಇದು ಅನಿವಾರ್ಯ ಎಂಬುದಾಗಿದೆ. ಗುಬ್ಬಿ ತಾಲ್ಲೂಕಿನಲ್ಲಿ ಸಹ ಪ್ರತಿದಿನ ಐವತ್ತಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಗಳು ಬಂದಿರುವುದೂ ಆತಂಕವಾಗುತ್ತಿದ್ದು, ಕೇವಲ ಪಟ್ಟಣ ಮಾತ್ರವಲ್ಲದೆ ಹಳ್ಳಿಹಳ್ಳಿಗೂ ಕೊರೊನಾ ವ್ಯಾಪಿಸುತ್ತಿದೆ ಈ ನಡುವೆ ಕೊರೊನಾವನ್ನು ಕಟ್ಟಿಹಾಕಬೇಕು ಎಂದರೆ ಲಾಕ್ ಡೌನ್ ಅನಿವಾರ್ಯ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಲಾಕ್ ಡೌನ್ ಅನಿವಾರ್ಯ
Get real time updates directly on you device, subscribe now.
Prev Post
Comments are closed.