ಕಾರು ಕದ್ದಿದ್ದ ದುಷ್ಕರ್ಮಿಗಳ ಬಂಧನ

7

Get real time updates directly on you device, subscribe now.


ಕುಣಿಗಲ್: ಧರ್ಮಸ್ಥಳ ಪ್ರವಾಸಕ್ಕೆಂದು ಬಾಡಿಗೆಗೆ ಕಾರು ಪಡೆದು ಚಾಲಕನನ್ನು ಥಳಿಸಿ, ಆತನ ಮೊಬೈಲ್ ಹಾಗೂ ನಗದು ದೋಚಿ ಕಾರಿನೊಂದಿಗೆ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಅಮೃತೂರು ಪೊಲೀಸರು ಬಂಧಿಸಿ, ಕಾರು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

ಬಂಧಿತರನ್ನು ಪಾಂಡವಪುರದ ಹನುಮಂತ ಸಾಗರ್ ಹಾಗೂ ಲೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ,ಇಬ್ಬರು ಜ. 24ರಂದು ಬೆಂಗಳೂರಿನ ಕೆಂಗೇರಿಯಿಂದ ಧರ್ಮಸ್ಥಳಕ್ಕೆ ಪ್ರವಾಸ ಹೊರಡಲು ಕೆಂಗೇರಿಯಲ್ಲಿನ ಟ್ರಾವೆಲ್ ಕಡೆಯವರಿಂದ ಎರಿಟಿಗ ಕಾರ್ ಬಾಡಿಗೆಗೆ ಪಡೆದು, ತಾಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಮೂತ್ರ ವಿಸರ್ಜನೆ ನೆಪದಲ್ಲಿ ಕಾರನ್ನು ನಿಲ್ಲಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಮೊಬೈಲ್ ಹಾಗೂ ನಗದು ಕಸಿದುಕೊಂಡು ಕೈಕಾಲು ಕಟ್ಟಿ ರಸ್ತೆ ಬದಿ ಬಿಟ್ಟು ಹೋಗಿದ್ದರು, ಜ.25 ರ ಬೆಳಗ್ಗೆ ಗ್ರಾಮಸ್ಥರು ನೋಡಿ ಚಾಲಕನನ್ನು ಉಪಚರಿಸಿ

ನಂತರ, ಚಾಲಕ ಹಜರತ್ ಅಲಿ ಕಾರಿನ ಮಾಲೀಕರಿಗೆ ವಿಷಯ ತಿಳಿಸಿ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಅಮೃತೂರು ಸಿಪಿಐ ಮಾಧ್ಯಾನಾಯಕ್, ಪಿಎಸ್ ಐ ಶಮಂತಗೌಡ ಮತ್ತು ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ. ಮದ್ದೂರಿನಲ್ಲಿದ್ದ ಕಾರನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!