ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1994ನೇ ಇಸವಿಯಿಂದ 2022ನೇ ಇಸವಿವರೆಗೆ ಬಗುರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ 6079 ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 1230 ಅರ್ಜಿಗಳು ಸಕ್ರಮವಾಗಿದ್ದರು ಕೂಡ ಬಡವರಿಗೆ ಸಾಗುವಳಿ ಚೀಟಿ ನೀಡದೆ ವಿಳಂಬ ಮಾಡಿರುವ ತಹಸೀಲ್ದಾರ್ ಅವರ ಕಾರ್ಯವೈಖರಿಯ ಬಗ್ಗೆ ಶಾಸಕ ಬಿ ಸುರೇಶ್ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು ತಾಲ್ಲೂಕು ಕ್ಷೇತ್ರ ವ್ಯಾಪ್ತಿಯ ಬಗರಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದು ಬಡವರಿಗೆ ಯಾವುದೇ ಮಾಲೀಕತ್ವ ಇಲ್ಲದೆ ಸರ್ಕಾರಿ ಕಚೇರಿಗಳ ಸುತ್ತಲೂ ಅಲೆಯುವಂತಾಗಿದೆ, ನಿಗದಿತ ಕಾಲಮಿತಿಯಲ್ಲಿ ತಾವು ಸಾಗುವಳಿ ಚೀಟಿ ಹಂಚಿಕೆ ಮಾಡಿದ್ದರೆ ನಗರದ ಸಮೀಪ 10 ಕಿ.ಮೀ ಅಂತರದಲ್ಲಿರುವವರಿಗೆಲ್ಲ ಮಾಲಿಕತ್ವ ಸಿಗುತ್ತಿತ್ತು, ಇಂದು ಸಾಗುವಳಿ ಚೀಟಿಯೂ ಇಲ್ಲ ಭೂಮಿಯು ಇಲ್ಲ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ನಿಮ್ಮ ಕಂದಾಯ ನಿರೀಕ್ಷಕರುಗಳೇ ನೇರಹೊಣೆ ಎಂದು ಕಿಡಿ ಕಾರಿದರು.
ಬಡವರಿಗೆ ಸಹಾಯ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವಂತೆ ತಮ್ಮ ಅಪ್ತ ಪ್ರಭಾಕರ್ ಅವರಿಗೆ ಸೂಚಿಸಿದರು.
ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಸಮಗ್ರವಾಗಿ ಪರಿಶೀಲಿಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗುರಿ ನೀಡಿದರು.
ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಕರೆರಂಗಯ್ಯ, ಶಿವರಾಜ್, ರೂಪ, ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಹಾಜರಿದ್ದರು.
Comments are closed.