ತುಮಕೂರು: 2025ರ ಮೊದಲ ಹಂತದ ಜೆಇಇ ಮೈನ್ಸ್ ಫಲಿತಾಂಶವು ಬಿಡುಗಡೆಗೊಂಡಿದ್ದು ವಿದ್ಯಾನಿಧಿ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಜನವರಿ ಕೊನೆಯ ವಾರದಲ್ಲಿ ನಡೆದ ಪರೀಕ್ಷೆಗೆ ದೇಶಾದ್ಯಂತ 13,11,544 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, 12,58,136 ಪರೀಕ್ಷೆ ಬರೆದಿದ್ದರು.
ಐಐಟಿಗಳಲ್ಲಿ ಪ್ರವೇಶಾತಿ ಪಡೆದು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆಯಲು ಅಗತ್ಯವಿರುವ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ಸ್ ನ ಮೊದಲ ಹಂತದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಸಿರಿ ಕೊಂಡ 99.97, ನಿತಿಶ್ ಪ್ರಕಾಶ್ 99.01, ರೋಹನ್ ಪಿ. 98.96, ಕುಶಾಲ.ಎಸ್. 98.38 ಮತ್ತು ಜೀವನ್.ಕೆ.ಎಲ್. 96.74 ಪರ್ಸಂಟೈಲ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ.
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ಪೈಕಿ ಜೆಇಇ ಮೈನ್ಸ್ ಎಂಬುದು ಅತ್ಯಂತ ಕಠಿಣವೇ ಹೌದು, ಇದರಲ್ಲಿ ಉತ್ತಮ ನಿರ್ವಹಣೆ ತೋರಿ ಐಐಟಿಗಳಲ್ಲಿ ಪ್ರವೇಶ ಪಡೆದು ಉನ್ನತ ವಿದ್ಯಾಭ್ಯಾಸ ಗಳಿಸಬೇಕೆಂಬುದು ಹೆಚ್ಚಿನ ವಿದ್ಯಾರ್ಥಿಗಳ ಕನಸು, ಪಾರದರ್ಶಕವಾಗಿ ನಡೆಯುವ ಈ ಪರೀಕ್ಷೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ತಮ್ಮ ಜ್ಞಾನ ಮತ್ತು ಕೌಶಲ ಅಭಿವ್ಯಕ್ತಿಸಲು ಅವಕಾಶ ಒದಗುತ್ತದೆ, ನಮ್ಮ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ, ಮುಂದಿನ ದಿನಗಳಲ್ಲಿ ಜೆಇಇ ಮೂಲಕ ಆಯ್ಕೆಯಾಗುವ ನಮ್ಮ ವಿದ್ಯಾರ್ಥಿಗಳ ಸಂಖ್ಯೆಇನ್ನಷ್ಟು ಹೆಚ್ಚಲಿ ಎಂಬುದು ನಮ್ಮ ಆಶಯ ಮತ್ತು ಗುರಿ, ತನ್ಮೂಲಕ ಪೋಷಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನು ನಿಜವಾಗಿಸಿದ್ದೇವೆ ಎಂಬ ಸಂತೃಪ್ತಿಯಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಸಂತಸ ವ್ಯಕ್ತ ಪಡಿಸಿದರು.
ಈ ವಿದ್ಯಾರ್ಥಿಗಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ, ಗ್ರಾಮೀಣ ಪ್ರದೇಶದ ಮಕ್ಕಳು ಕೂಡಾ ಸೂಕ್ತ ಅವಕಾಶ ಒದಗಿಸಿದರೆ ಕಲಿಕೆಯಲ್ಲಿ ಉತ್ತಮ ಸಾಧನೆ ತೋರಿಸುತ್ತಾರೆ ಎಂಬುದಕ್ಕೆ ಈ ಮಕ್ಕಳೇ ಮಾದರಿ ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಬಿ.ಜಯಣ್ಣ ಶುಭ ಹಾರೈಸಿದರು.
ಇದೇ ಏಪ್ರಿಲ್ 1 ರಿಂದ 8ರ ವರೆಗೆ ನಡೆಯಲಿರುವ ಜೆಇಇ ಮೈನ್ಸ್ ನ ಎರಡನೇ ಹಂತದ ಪರೀಕ್ಷೆಗೆ ಫೆಬ್ರವರಿ 10 ರಿಂದ ಫೆಬ್ರವರಿ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
Comments are closed.