1,396 ಮಂದಿಗೆ ಸೋಂಕು: 5 ಸಾವು

ತುಮಕೂರು, ಮಧುಗಿರಿ, ಪಾವಗಡ, ಗುಬ್ಬಿಯಲ್ಲಿ ಸೋಂಕಿತರು ಹೆಚ್ಚಳ

261

Get real time updates directly on you device, subscribe now.

ತುಮಕೂರು: ಜಿಲ್ಲೆಯಾದ್ಯಂತ ಇಂದು 1,396 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 34,233 ಏರಿಕೆ ಕಂಡಿದೆ. 6,028 ಸಕ್ರಿಯ ಪ್ರಕರಣಗಳ ಪೈಕಿ 383 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 509, ಚಿನಾಹಳ್ಳಿ 69, ಗುಬ್ಬಿ 138, ಕೊರಟಗೆರೆ 89, ಕುಣಿಗಲ್ 97, ಮಧುಗಿರಿ 109, ಪಾವಗಡ 187, ಶಿರಾ 59, ತಿಪಟೂರು 78, ತುರುವೇಕೆರೆಯಲ್ಲಿ 61 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಒಟ್ಟು ಐವರು ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ಮಧುಗಿರಿ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವ್ಯಕ್ತಿ(45) ಹಾಗೂ ಅನ್ಯಕಾರಣದಿಂದ ತುರುವೇಕೆರೆ ತಾಲೂಕಿನ ಮಂಚನಹಳ್ಳಿ ಗ್ರಾಮದ ಮಹಿಳೆ (45), ತುಮಕೂರಿನ ಭರತ್ ನಗರದ ಮಹಿಳೆ (58), ತುಮಕೂರಿನ ಆದರ್ಶ ನಗರದ ವ್ಯಕ್ತಿ (58), ಕೊರಟಗೆರೆ ದೊಡ್ಡಪೇಟೆ ಬೀದಿಯ ಮಹಿಳೆ (72) ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!