ಪ್ರೆಸಿಡೆನ್ಸಿ ಕಾಲೇಜಿಗೆ ಜೆಇಇ ಮೈನ್ಸ್ ನಲ್ಲಿ ಪ್ರಥಮ

11

Get real time updates directly on you device, subscribe now.


ಶಿರಾ: ಇಲ್ಲಿನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು 2024-25ನೇ ಸಾಲಿನ ಜೆಇಇ ಮೈನ್ಸ್ ನ ಮೊದಲ ಹಂತದ ಪರೀಕ್ಷೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಹಳು ಅತ್ಯುತ್ತಮ ಪರ್ಸೆನ್ಟೈಲ್ ನೊಂದಿಗೆ ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ, ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬಂದಿದ್ದು165ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆಗೆಅರ್ಹತೆ ಪಡೆಯುವ ಸಾಧ್ಯತೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ.ಡಿ.ಕೆ. ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಅನಿರುಧ್ಎಸ್.ಜೆ,(97.61), ಮನೀಷ್.ಪಿ,(97.48), ಮಾನಸ.ಬಿ.ಜೆ (96.27), ಗಗನಶ್ರೀ.ಕೆ.ಟಿ. (96.23), ಪ್ರಜ್ಞಾರಾಣಿ (95.90), ಪ್ರೀತಮ್.ಯು. (95.76), ಅಮಿತ್.ಬಿ.ಇ (95.03), ಮಧು.ಎ.ಎಂ. (94.91), ಪ್ರೀತಮ್.ಆರ್. (94.77), ಲೇಖನ.ಆರ್. (94.46), ಶ್ರೇಯಾ.ಬಿ. (94.12), ಅಶ್ಚಿತ್.ಬಿ (93.37), ರೋಹಿತ್.ಎಸ್. (93.36), ಚಿರಂತ್.ಜಿ.ಟಿ (93.25), ಪೃಥ್ವಿಕೇಶವ್.ಕೆ. (93.15), ಮಹಮದ್ ಅನೀಸ್ (92.97), ಗುಣಶ್ರೀ.ಎಸ್.ಎಂ (92.78), ಸಿಂಧು.ಟಿ.ಜೆ (92.78), ಸುಭಾಷ್ ಅರಳಿ (92.69), ಯಶಿಕಾ.ಆರ್ (92.41), ಸಂಜು.ಟಿ (92.26), ಸಚಿನ್.ಎಸ್.ಎಂ (91.97), ದ್ಯುತೀಷ್ (91.91), ಮಧು.ಎಚ್ (91.91), ಅಜಯ್.ಡಿ (91.74), ಐಶ್ವರ್ಯ.ಆರ್.ಎನ್ (91.57), ನಿಖಿಲ್.ಸಿ.ಆರ್ (91.56), ಜಿ.ಎಸ್.ಆದರ್ಶ್ಕುಮಾರ್ (91.23), ಲಿಖಿತ್ ಗೌಡ.ಎಸ್.ಕೆ( 91.23), ಸಿದ್ದೇಶ್.ಕೆ.ಎಂ (91.21), ದಕ್ಷ್.ಕೆ.ಎನ್ (91.01), ಶರತ್.ಎಸ್.ಕೆ (90.68), ವನಜ.ಎಸ್.ಆರ್ (90.66) ಒಟ್ಟು65 ವಿದ್ಯಾರ್ಥಿಗಳು 85 ಕ್ಕೂ ಹೆಚ್ಚು ಪರ್ಸೆಂಟೈಲ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಕಾಲೇಜಿನಲ್ಲಿ ನಡೆಯುತ್ತಿರುವ ವ್ಯವಸ್ಥಿತ ಹಾಗೂ ಗುಣಮಟ್ಟದ ಬೋಧನೆ, ನಿರಂತರ ತರಗತಿಗಳು ಮತ್ತು ಮಾಕ್ ಟೆಸ್ಟ್ ಗಳೇ ನಮ್ಮ ಈ ಸಾಧನೆಗೆ ಕಾರಣ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು, ಈ ಎಲ್ಲಾ ವಿದ್ಯಾರ್ಥಿಗಳನ್ನು ಕರ್ನಾಟಕ ವಿಧಾನಪರಿಷತ್ನ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷ ಚಿದಾನಂದ್ ಎಂ.ಗೌಡ ಅಭಿನಂದಿಸಿ ಮಾತನಾಡಿ, ಮುಂಬರುವ ಜೆಇಇ ಮೈನ್ಸ್ ನ ದ್ವಿತೀಯ ಹಂತದ ಪರೀಕ್ಷೆ, ಕರ್ನಾಟಕ ಸಿಇಟಿ ನೀಟ್ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ರ್ಯಾಂಕ್ ಪಡೆದು ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಅರ್ಹತೆ ಪಡೆಯಿರೆಂದು ಶುಭ ಕೋರಿದರು.

Get real time updates directly on you device, subscribe now.

Comments are closed.

error: Content is protected !!