ತುಮಕೂರು: ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀಸಿದ್ದಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ ಸ್ ಮತ್ತು ಕ್ರೌನ್ ಬ್ರಿಡ್ ಜ್ ವಿಭಾಗ ಹಾಗೂ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಸಹಯೋಗದೊಂದಿಗೆ ಪ್ರೊಸ್ತೋಡಾಂಟಿಕ್ ಸ್ ದಿನಾಚರಣೆಯ ಅಂಗವಾಗಿ ಕೃತಕ ಹಲ್ಲುಗಳ ಜೋಡಣೆ ಮತ್ತು ಮುಖ ಸೌಂದರ್ಯದ ಪುನರ್ ಸ್ಥಾಪನೆ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಾಗಾರವನ್ನು ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಉದ್ಘಾಟಿಸಿ, ಮುಖ ಸೌಂದರ್ಯದ ಪುನರ್ ಸ್ಥಾಪನೆ ಮತ್ತು ಹಲ್ಲುಗಳ ಬದಲಿ ಜೋಡಣೆಯಲ್ಲಿ ದಂತ ವೈದ್ಯರ ಪಾತ್ರ ಮುಖ್ಯವಾಗಿರುತ್ತದೆ, ಅವರು ಪರಿಣಿತಿಯಿಂದಾಗಿ ವಿಪತ್ತುಗಳಂದ ಹಾನಿಗೊಳಗಾದ ಹಲ್ಲುಗಳ ಬದಲಿಗೆ ಕೃತಕ ಹಲ್ಲುಗಳನ್ನು ಜೋಡಿಸಿ, ನಿರ್ವಹಿಸಲು ಮತ್ತು ದಂತ ಹದಗೆಡುವುದನ್ನು ತಡೆಯಲು ಆಧುನಿಕ ಚಿಕಿತ್ಸಾ ಕ್ರಮ ಅನುಸರಿಸಿ ಚಿಕಿತ್ಸೆ ನೀಡುತ್ತಾರೆ ಎಂದರು.
ಸಿದ್ದಾರ್ಥ ದಂತ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಕುಡುವಾ ಮಾತನಾಡಿ, ದಂತ ಸಂರಕ್ಷಣೆಯಿಂದ ಮುಖ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯ, ಒಂದು ವೇಳೆ ದುರಂತ ಮತ್ತು ಇನ್ನಿತರ ಅವಗಡಗಳಲ್ಲಿ ದಂತಗಳು ಹಾನಿಗೀಡಾದಾಗ, ಆಧುನಿಕ ಚಿಕಿತ್ಸಾ ಕ್ರಮಗಳನ್ನು ಮತ್ತು ಪದ್ಧತಿ ಅಳವಡಿಸಿಕೊಂಡು ಕೃತಕ ಹಲ್ಲುಗಳನ್ನು ಜೋಡಿಸಿ, ಪೂರ್ಣಮಟ್ಟದಲ್ಲಿ ಪೂರ್ಣಬಾಯಿ ಪುನರ್ವಸತಿ ಮಾಡುವ ನಿಟ್ಟಿನಲ್ಲಿ ತಜ್ಞ ದಂತ ವೈದ್ಯರ ಪಾತ್ರ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ ಕರ್ನಾಟಕ ಶಾಖೆಯ ಖಜಾಂಚಿ ಹಾಗೂ ದಂತ ತಜ್ಞೆಯಾದ ಡಾ.ಯಾಮಿನಿ ನಂದಿನಿ ಅವರು, ದಂತಗಳ ಪುನರ್ ನಿರ್ಮಾಣ ಮತ್ತು ಮ್ಯಾಕ್ಸಿಲೊಫೇಶಿಯಲ್ ತೊಂದರೆಗಳಿಗೆ ಚಿಕಿತ್ಸೆ ಪರಿಹಾರಗಳು ಎಂಬ ವಿಷಯ ಕುರಿತು ಮಾತನಾಡಿ,ಪೆರಿಯೊಡಾಂಟಿಸ್ಟ್ಗಳು ಮತ್ತು ದಂತವೈದ್ಯರು ಆಸ್ಪತ್ರೆಗಳಲ್ಲಿ ದೀರ್ಘಕಾಲದ ದಂತದ ಉರಿಯೂತ ನಿರ್ವಹಿಸಲು ಮತ್ತು ಮೌಖಿಕ ಆರೋಗ್ಯ ಪುನಃಸ್ಥಾಪಿಸಲು, ಒಸಡು ಶಸ್ತ್ರಚಿಕಿತ್ಸೆ ಮತ್ತು ಹಲ್ಲುಗಳ ಆರೈಕೆ ಹೇಗೆ ಮಾಡಬೇಕೆಂಬ ಮಾಹಿತಿ ನೀಡಿದರಲ್ಲದೆ, ಇಂದಿನ ಆಹಾರ ಪದ್ಧತಿ ಅಳವಡಿಕೆಯಿಂದಾಗುತ್ತಿರುವ ದಂತ ರೋಗಗಳ ನಿರ್ಮೂನೆಯಲ್ಲಿ ದಂತತಜ್ಞರ ಪಾತ್ರ ಕುರಿತು ವಿವರಿಸಿದರು.
ಕಾರ್ಯಾಗಾರದ ಆಯೋಜಕರು ಹಾಗೂ ಶ್ರೀಸಿದ್ಧಾರ್ಥ ದಂತ ಕಾಲೇಜಿನ ಪ್ರೊಸ್ತೋಡಾಂಟಿಕ್ ಸ್ ಮತ್ತು ಕ್ರೌನ್ ಬ್ರಿಡ್ ಜ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಪದ್ಮಜಾ, ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್, ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಡಾ.ಶ್ರೀನಿವಾಸ್, ಡಾ. ರಮೇಶ್ ಚೌಧರಿ, ಡಾ.ರಾಘವೇಂದ್ರ, ಡಾ.ಚೇತನ, ಡಾ.ನೀಲಾಂಜಲಿ, ಡಾ. ಶರಣ್ ಹಾಜರಿದ್ದರು.
Comments are closed.