ಕುಣಿಗಲ್: ಬ್ಯಾಂಕ್ ನಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಸಾಲ ಕೊಡಿಸುವ ನೆಪದಲ್ಲಿ ವೃದ್ಧೆಯರನ್ನು ಗುರಿಯಾಗಿಸಿಕೊಂಡು, ಒಡವೆ ದೋಚುತ್ತಿದ್ದ ದುಷ್ಕರ್ಮಿಯನ್ನು ಕುಣಿಗಲ್ ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಬಂಧಿತನನ್ನು ಹುಣಸೂರಿನ ಸಂಪತ್ ಎಂದು ಗುರುತಿಸಲಾಗಿದೆ, ಈತ ಬಸ್ ನಿಲ್ದಾಣಗಳಲ್ಲಿರುವ ಏಕಾಂಗಿ ವೃದ್ಧೆಯರನ್ನು ಗುರುತಿಸಿ ಬ್ಯಾಂಕ್ ನಿಂದ ಸಾಲ ಕೊಡಿಸುವ ಅಥವಾ ವಿವಿಧ ಯೋಜನೆಯಲ್ಲಿ ಹೆಚ್ಚಿನ ಹಣ ಕೊಡಿಸುವ ನೆಪದಲ್ಲಿ ಪುಸಲಾಯಿಸಿ ಒಡವೆ ಧರಿಸಿದರೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ನೀಡುವುದಿಲ್ಲವೆಂದು ನಂಬಿಸಿ ವೃದ್ಧೆ ಧರಿಸಿದ್ದ ಒಡವೆಗಳನ್ನು ಬಿಚ್ಚಿಸಿ ವಂಚಿಸಿ ಪರಾರಿಯಾಗುತ್ತಿದ್ದ.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣ, ಜಕ್ಕನಹಳ್ಳಿ, ನಂಜನಗೂಡು, ನಾಗಮಂಗಲ ವಿವಿಧೆಡೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಣಿಗಲ್ ಸಿಪಿಐ ನವೀನ್ ಗೌಡ, ಪಿಎಸ್ ಐ ಕೃಷ್ಣಕುಮಾರ್, ಸಿಬ್ಬಂದಿ ಯತೀಶ್, ಯೋಗೇಶ್, ಹನುಮಂತ, ಮಂಜುನಾಥ್ ಇತರರ ತಂಡ ಆರೋಪಿ ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಒಡವೆ ದೋಚುತ್ತಿದ್ದ ದುಷ್ಕರ್ಮಿ ಬಂಧನ
Get real time updates directly on you device, subscribe now.
Comments are closed.