ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ ತಿರುವು

6

Get real time updates directly on you device, subscribe now.


ಕುಣಿಗಲ್: ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ ಬೇರೊಂದು ರೀತಿ ತಿರುವು ಪಡೆದಿದ್ದು, ಮೃತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಅಮೃತೂರು ಪೊಲೀಸರು ಮಂಗಳೂರಿನ ಉಲ್ಲಾಳದಲ್ಲಿ ಅಡಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇಗೌಡನ ಪಾಳ್ಯದಲ್ಲಿ ಅಪ್ರಾಪ್ತೆ ವಿದ್ಯಾರ್ಥಿನಿ ಮನೆಯಲ್ಲಿ ನೇಣುಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಳು, ಘಟನೆ ಸಂಬಂಧಿಸಿದಂತೆ ಮೃತಳ ತಾಯಿ ಅಮೃತೂರು ಪೊಲೀಸರಿಗೆ ಆತ್ಮಹತ್ಯೆಪ್ರಕರಣದ ಬಗ್ಗೆ ದೂರು ನೀಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು, ಆದರೆ ಮೃತ ವಿದ್ಯಾರ್ಥಿನಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಸೋದರಿಯೊಂದಿಗೆ 9ನೆ ತರಗತಿ ವ್ಯಾಸಂಗಕ್ಕೆ ಬರುತ್ತಿದ್ದಾಗ ಪಟ್ಟಣದ ಕೋಟೆ ಪ್ರದೇಶದ ಸುಹೇಲ್ ಎಂಬಾತ ಪ್ರೀತಿಸುವಂತೆ ಪೀಡಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಮೃತಳ ಆತ್ಮಹತ್ಯೆಗೆ ಮುನ್ನ ಶಾಲೆಯ ಆವರಣದಲ್ಲೆ ವಿದ್ಯಾರ್ಥಿನಿಗೆ ಹಲ್ಲೆ ನಡೆಸಿ ಬೆದರಿಸಿದ್ದನೆಂದು ಮೃತಳ ಸೋದರಿ ಸೇರಿದಂತೆ ಶಾಲೆಯ ಸಮೀಪದ ಕೆಲವರು, ಶಾಲೆಯವರು ಮೃತಳ ತಾಯಿಗೆ ವಿಷಯ ತಿಳಿಸಿದ್ದರು, ಮೃತಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದಲಿತಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಮೃತೂರು ಸಿಪಿಐ ಮಾದ್ಯಾನಾಯಕ್, ಪಿಎಸೈ ಶಮಂತಗೌಡ ಸಿಬ್ಬಂದಿ, ಮೃತಳ ತಾಯಿಯು ನೀಡಿದ ಬೇರೊಂದು ದೂರು ದಾಖಲಿಸಿ ತನಿಖೆ ಕೈಗೊಂಡು ಘಟನೆಗೆ ಕಾರಣ ಎನ್ನಲಾದ ಸುಹೇಲ್ ಎಂಬಾತ ಮಂಗಳೂರಿನ ಉಲ್ಲಾಳದಲ್ಲಿ ಅಡಗಿಕೊಂಡಿದ್ದು, ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!