ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಕಂಪಲಾಪುರ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ಕಸ್ತೂರಿ (43)ಎಂದು ಗುರುತಿಸಲಾಗಿದೆ, ಇವರು ಬಾದಾಮಿ ಸಮೀಪದ ಗುಳೇದ ಗುಡ್ಡದವರಾಗಿದ್ದಾರೆ, ಗುಳೇದಗುಡ್ಡದಿಂದ ಮೈಸೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ, ಮೃತರ ಪತಿ ಬಸವರಾಜು ಮೈಸೂರಿನಲ್ಲಿ ಇಂಜಿನಿಯರ್ ಆಗಿದ್ದು ಕುಟುಂಬ ಸಮೇತ ತೆರಳುವಾಗ ಘಟನೆ ನಡೆದಿದೆ, ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.