ಕೊರಟಗೆರೆ: ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿಯಿರುವಂತಹ ವಿಜಯ್ ಸರ್ವೀಸ್ ಸ್ಟೇಷನ್ ಹಿಂಭಾಗದಲ್ಲಿನ ಇಮ್ರಾನ್ ಪಾಷ ಎಂಬುವರ ರೈತರ ಜಮೀನಿನಲ್ಲಿ ಕಟ್ಟಿದ್ದ ಕರುವಿನ ಮೇಲೆ ಭಾನುವಾರ ರಾತ್ರಿ ಚಿರತೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಕರು ಮೃತಪಟ್ಟಿದ್ದು ಕೂಡಲೆ ರೈತನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾನೆ.
ಪ್ರತಿನಿತ್ಯದಂತೆ ಕರುವಿಗೆ ಮೇವು ಹಾಕಲು ಹೋದಂತಹ ಸಂದರ್ಭದಲ್ಲಿ ಭಾನುವಾರ ರಾತ್ರಿಯ ವೇಳೆ ಚಿರತೆ ದಾಳಿ ನಡೆಸಿ ಕರು ಬಲಿ ತೆಗೆದುಕೊಂಡಿರುವುದು ಗಮನಕ್ಕೆ ಬಂದಿತ್ತು, ಕೂಡಲೇ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಅರಣ್ಯಾಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಘಟನೆಯ ವಿವರದ ಬಗ್ಗೆ ರೈತ ಇಮ್ರಾನ್ ಪಾಷನಿಂದ ಮಾಹಿತಿ ಪಡೆದಿದ್ದಾರೆ.
10 ಸಾವಿರ ಪರಿಹಾರ: ಚಿರತೆ ದಾಳಿ ನಡೆಸಿ ಕರುವನ್ನು ಬಲಿ ತೆಗೆದುಕೊಂಡಿರುವ ವಿಚಾರವನ್ನು ಇಮ್ರಾನ್ ಪಾಷ ಎಂಬ ರೈತ ಮಾಹಿತಿ ಹಂಚಿಕೊಂಡಿದ್ದು, ಸುಮಾರು 1 ವರ್ಷದ ಕರು ಎಂದು ಅಂದಾಜಿಸಲಾಗಿದ್ದು, ಅರಣ್ಯ ಇಲಾಖೆಯಿಂದ 10 ಸಾವಿರ ಪರಿಹಾರವನ್ನು ರೈತನಿಗೆ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ಸಾರ್ವಜನಿಕರು ಚಿರತೆಗೆ ಭಯಪಡದೆ ಜಾಗೃತರಾಗಿ ರಾತ್ರಿ ವೇಳೆ ಜಮೀನಿನ ಕಡೆ ಒಬ್ಬಂಟಿಯಾಗಿ ಓಡಾಡುವುದನ್ನು ನಿಲ್ಲಿಸಿ, ಮತ್ತೆ ಮತ್ತೆ ಚಿರತೆ ಕಾಣಿಸಿಕೊಂಡಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿಗಳು ಸಲಹೆ ನೀಡಿದರು.
Comments are closed.