ಗುಬ್ಬಿ: ಕಷ್ಟಪಟ್ಟು ಬೆಳೆದ ರೈತರಿಗೆ ಸಿಗುತ್ತಿಲ್ಲ, ಬೆಂಬಲ ಬೆಲೆ ಹೂವು ಬೆಳೆದು ಕೈ ಸುಟ್ಟು ಕೊಂಡ ರೈತನ ಕಥೆ ಇದು.
ಗುಬ್ಬಿ ತಾಲೂಕಿನ ಸಿಂಗೋನಹಳ್ಳಿ ಗ್ರಾಮದ ರಾಮಚಂದ್ರಯ್ಯ ಸುಮಾರು 2.23 ಕುಂಟೆ ಜಮೀನಿನಲ್ಲಿ ಚಂಡು ಹೂವು ಬೆಳೆದಿದ್ದಾರೆ, ಕೆಜಿ ಗೆ ಐದು ರೂಪಾಯಿ ಕೂಡ ಸಿಗುತ್ತಿಲ್ಲ, ಹಾಗಾಗಿ ಗಿಡದಲ್ಲಿಯೇ ಹೂವು ಬಿಟ್ಟು ಕೈ ಚೆಲ್ಲಿ ಕುಳಿತಿದ್ದಾರೆ.
ದೇಶದ ಬೆನ್ನೆಲುಬು ರೈತ, ಆದರೆ ಅವನ ಬೆನ್ನೆಲುಬೆ ಮುರಿದಿದ್ದರು ಸರಕಾರ ಮಾತ್ರ ರೈತರ ಕಡೆ ಗಮನ ಹರಿಸದೆ ಇರುವುದು ಬೇಸರ ತರುತ್ತದೆ.
ಹಲವು ವರ್ಷಗಳಿಂದಲೂ ಈ ರೈತರು ಹಲವು ಬೆಳೆ ಬೆಳೆಯುವ ಮೂಲಕ ರೈತಾಪಿ ಜೀವನ ಸಾಗಿಸುತ್ತಿದ್ದಾರೆ ಯಾವ ಬೆಳೆ ಬೆಳೆದರು ಸಹ ಹೆಚ್ಚಿನ ಲಾಭ ಸಿಗದೇ ನಷ್ಟದಲ್ಲಿ ಬದುಕು ನಡೆಸುವಂತಾಗಿದೆ ಈ ಕುಟುಂಬ.
ತಮ್ಮ ಭೂಮಿಯಲ್ಲಿ ಚಂಡು, ಹೂವು, ತೊಗರಿ, ಗೆಡ್ಡೆ ಕೋಸು, ಟಮೋಟ, ಆಲೂಗಡ್ಡೆ, ಕುಂಬಳಕಾಯಿ, ಬದನೆ, ರಾಗಿ ಹೀಗೆ ಪ್ರತಿ ಭಾರಿಯು ಬದಲಾವಣೆ ಮಾಡುತ್ತಲೆ ಬೆಳೆ ಬೆಳೆದರು ಸಹ ಉತ್ತಮ ಲಾಭ ಬರದೆ ನಷ್ಟ ಅನುಭವಿಸಬೇಕಾಗಿದೆ.
ಈ ಭಾರಿ ಈ ಭೂಮಿಯಲ್ಲಿ ಸುಮಾರು 2.5 ಲಕ್ಷ್ಮ ಖರ್ಚು ಮಾಡಿ ಚಂಡು ಹೂವು ಬೆಳೆದಿದ್ದಾರೆ, ಅದರೆ ಅದಕ್ಕೆ ಸರಿಯಾದ ಬೆಲೆ ಇಲ್ಲದಾಗಿದ್ದು, ಮಾರುಕಟ್ಟೆಯಲ್ಲಿ ಲಾಭವಿಲ್ಲದೆ ನಷ್ಟ ಅನುಭವಿಸಿದ್ದಾರೆ, ಬೆಂಗಳೂರು, ತುಮಕೂರು ಮಾರುಕಟ್ಟೆಯಲ್ಲಿ ಕೇಳುವವರೆ ಇಲ್ಲದಾಗಿದ್ದು ಗಿಡದಿಂದ ಹೂವು ಬಿಡಿಸಿದರೆ ಅದರಲ್ಲೂ ಕೂಲಿ ನೀಡಿ ನಷ್ಟವಾಗುತ್ತೆ, ಹಾಗಾಗಿ ಗಿಡದಲ್ಲೇ ಹೂವು ಬಿಟ್ಟಿದ್ದಾರೆ, ನೋಡುವುದಕ್ಕೆ ಇಡೀ ತೋಟವೇ ಅಂದವಾಗಿ ಕಾಣುತ್ತಿದೆ, ಆದರೆ ಅವರ ಮುಖದಲ್ಲಿ ಮಾತ್ರ ಬೇಸರ ಎದ್ದು ಕಾಣುತ್ತಿದೆ.
ಸರ್ಕಾರ ಇಂತಹ ಚಿಕ್ಕ ಪುಟ್ಟ ರೈತರನ್ನು ಕೈ ಹಿಡಿಯುವ ಕೆಲಸ ಮಾಡದೆ ಇರುವುದು ನಿಜವಾಗಿಯೂ ದುರಂತ, ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದೆ ಇರುವುದು ಸಹ ನಷ್ಟಕ್ಕೆ ದಾರಿಯಾಗಿದೆ.
Comments are closed.