ಹುಳಿಯಾರು: ಮಹಾಮಾರಿ ಕೊರೊನಾ ವೈರಸ್ ಭೀತಿ ಈಗ ಸಂತೆ ವ್ಯಾಪಾರಸ್ಥರಿಗೂ ತಟ್ಟಿದ್ದು ವೈರಸ್ ಹರಡುವ ಭೀತಿಯಿಂದ ಹುಳಿಯಾರಿನ ಪೇಟೆ ಬೀದಿಯಲ್ಲಿ ನಡೆಯುತ್ತದ್ದ ಸಂತೆ ಸ್ಥಳವನ್ನು ಇಲ್ಲಿನ ಎಂಪಿಎಸ್ ಶಾಲಾ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಹಾಲಿ ಸಂತೆ ನಡೆಯುತ್ತಿದ್ದ ಪೇಟೆ ಬೀದಿಯ ಸ್ಥಳ ಕಿರಿದಾಗಿದ್ದು ಸಾಮಾಜಿಕ ಅಂತಕ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸುವುದು ಅಸಾಧ್ಯ ಮಾತಾಗಿತ್ತು. ಅಲ್ಲದೆ ಹುಳಿಯಾರು ಸಂತೆಗೆ ಅಕ್ಕಪಕ್ಕದ ಸಾವಿರಾರು ಜನರು ಬರುವುದರಿಂದ ಸಂತೆ ಮೈದಾನ ಕಿಷ್ಕಿಂದೆಯಾಗಿ ಒಬ್ಬರಿಗೊಬ್ಬರು ತಗುಲಿಸಿಕೊಂಡು ಓಡಾಡುವುದು, ವ್ಯಾಪಾರ ಮಾಡುವುದು ಸಾಮಾನ್ಯವಾಗಿತ್ತು. ಹಾಗಾಗಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿಶಾಲವಾಗಿರುವ ಎಂಪಿಎಸ್ ಶಾಲಾ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.
ಮುನ್ಸೂಚನೆ ಇಲ್ಲದೆ ಏಕಾಏಕಿ ಬುಧವಾರ ರಾತ್ರಿ ಸಂತೆ ಸ್ಥಳಾಂತರದ ತಿರ್ಮಾನ ತೆಗೆದುಕೊಂಡು ಗುರುವಾರ ಬೆಳಗ್ಗೆ ಸ್ಥಳಾಂತರಿಸಲು ಮುಂದಾದಾಗ ಕೆಲ ಗೊಂದಲ ಸೃಷ್ಠಿಯಾಯಿತು. ಸ್ಥಳಾಂತರದ ವಿಷಯ ತಿಳಿಯದ ಅನೇಕರು ಹಾಲಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಅಂಗಡಿ ಜೋಡಿಸಿಕೊಂಡು ನಂತರ ವಿಷಯ ತಿಳಿದು ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಕೊರೊನಾ ಬೀತಿಯ ಹಿನ್ನೆಲೆಯಲ್ಲಿ ಅನೇಕ ರೈತರು, ವ್ಯಾಪಾರಿಗಳು ಸಂತೆಗೆ ಬಾರದಿದ್ದರಿಂದ ಸಂತೆಯ ಕಳೆಗುಂದಿತ್ತು.
ವಾರದ ಸಂತೆಯಲ್ಲದೆ ಹುಳಿಯಾರಿನ ನಾಡಕಛೇರಿ ಬಳಿ ನಡೆಯುತ್ತಿದ್ದ ಡೈಲಿ ಮಾರುಕಟ್ಟೆಯೂ ಸಹ ಎಂಪಿಎಸ್ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಎಂಪಿಎಸ್ ಶಾಲಾ ಮುಂಭಾಗದ ನಾಡಕಛೇರಿ ಮೈದಾನದಲ್ಲಿದ್ದ ಇವರು ವಿಷಯ ತಿಳಿದು ಹೊಸ ಸ್ಥಳಕ್ಕೆ ಮೊದಲು ಆಗಮಿಸಿ ಮುಖ್ಯ ಹಾಗೂ ಮೊದಲ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ವಾರದ ಸಂತೆಯವರು ತೀರಾ ಹಿಂದಕ್ಕೆ ಹೋಗಿ ಅಂಗಡಿಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು.
ಶಾಲೆಯ ಬಾಗಿಲ ಬಳಿಯೇ ಅಂಗಡಿಗಳನ್ನು ಇಟ್ಟುಕೊಂಡಿರುವುದಕ್ಕೆ ಮುಖ್ಯಶಿಕ್ಷಕಿ ಅಂಬಿಕ ಆವರು ಆಕ್ಷೇಪ ವ್ಯಕ್ತಪಡಿಸಿದರು. ಏ.30 ರ ವರೆವಿಗೂ ಶಾಲೆ ತೆರೆದಿದ್ದು ಶಿಕ್ಷಕರು ನಿತ್ಯ ಬಂದೋಗುತ್ತಾರೆ. ಅಲ್ಲದೆ ಮಕ್ಕಳು ಮತ್ತು ಪೋಷಕರು ರೇಷನ್ ಪಡೆಯಲು ಬರುತ್ತಾರೆ. ಹಾಗಾಗಿ ಬಾಗಿಲ ಬಳಿಯ ಅಂಗಡಿಗಳಿಂದ ತೊಂದರೆಯಾಗುತ್ತಿದ್ದು ಇಲ್ಲಿಂದ ತೆರವು ಮಾಡಿಸಿ ಕಾಂಪೌಂಡ್ ಪಕ್ಕದಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಂಡರು. ಪಪಂ ಎಂಜಿನಿಯರ್ ಮಂಜುನಾಥ್ ಅವರು ನಾಳೆಯಿಂದ ಶಾಲೆಯ ಬಾಗಿಲ ಬಳಿ ಇಡದಂತೆ ವ್ಯಾಪಾರಸ್ಥರಿಗೆ ಸೂಚಿಸಿದರು.
ಹುಳಿಯಾರು ಎಂಪಿಎಸ್ ಮೈದಾನಕ್ಕೆ ಸಂತೆ ಸ್ಥಳಾಂತರ
Get real time updates directly on you device, subscribe now.
Comments are closed.