ಕುಣಿಗಲ್: ಪೌರ ಕಾರ್ಮಿಕರಿಗೆ ನಿವೇಶನ, ವಸತಿ ಸೌಲಭ್ಯಕ್ಕೆ ಜಾಗ ಗುರುತಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಪುರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಹಿಂದಿನ ದಿನಗಳಲ್ಲಿ ಕಸ, ಪೌರ ಕಾರ್ಮಿಕರೇ ತಲೆಯ ಮೇಲೆ ಹೊತ್ತು ಸ್ವಚ್ಛಗೊಳಿಸಬೇಕಾಗಿತ್ತು, ಆದರೆ ಇಂದು ಅಂತಹ ಅನಿಷ್ಟ ಪದ್ಧತಿ ರದ್ದಾಗಿವೆ, ಅಂದಿನ ಪರಿಸ್ಥಿತಿಗಿಂತ ಇಂದಿನ ಸ್ಥಿತಿ ಎಷ್ಟೋ ಉತ್ತಮವಾಗಿದೆ, ನಗರ ನೈರ್ಮಲ್ಯ ನಿರ್ವಹಣೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ, ಪುರಸಭೆಯಲ್ಲಿನ 19 ಪೌರ ಕಾರ್ಮಿಕರ ಖಾಯಂಗಾಗಿ ಕ್ರಮ ಕೈಗೊಳ್ಳಲಾಗುವುದು, ಪೌರ ಕಾರ್ಮಿಕರ ಅಹವಾಲುಗಳೇನಿದ್ದರೂ ಈಡೇರಿಸಲು ಸರ್ಕಾರ ಸದಾ ಸಿದ್ಧವಿದೆ, ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಕೆಲಸದಲ್ಲಿ ಕೊರತೆ ಕಂಡಾಗ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.
ಹೆಚ್ಚುವರಿಯಾಗಿ ಮತ್ತೆ 18 ಜನ ಪೌರ ಕಾರ್ಮಿಕರನ್ನು ಹೊಸದಾಗಿ ತೆಗೆದುಕೊಳ್ಳಲು ಕ್ರಮ ಸಿದ್ಧತೆಯಲ್ಲಿದ್ದು ಇದರಿಂದ ನಗರ ನೈರ್ಮಲ್ಯ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ, ಒಟ್ಟು 43 ಮಂದಿ ಪೌರ ಕಾರ್ಮಿಕರಿದ್ದು 23 ಜನರಿಗೆ ತಲ 7,000 ಸಹಾಯಧನ ನೀಡಲಾಗುವುದು, ಬಾಕಿ ಉಳಿದವರಿಗೆ ಶಾಸಕರು ಸ್ವತಃ ಹಣದಲ್ಲಿ ಸಹಾಯಧನ ನೀಡುವುದರ ಜೊತೆಗೆ ಎಲ್ಲರಿಗೂ ಹೊಸ ಬಟ್ಟೆಗಳನ್ನು ವಿತರಿಸಲಾಗುವುದು ಎಂದರು.
ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು ಪುರಸಭಾ ಮುಖ್ಯಾಧಿಕಾರಿ ಮಂಜುಳಾ, ಇಂಜಿನಿಯರ್ ಚಂದ್ರಶೇಖರ್, ಬಿಂದು, ಪುರಸಭಾ ಸದಸ್ಯರಾದ ರಂಗಸ್ವಾಮಿ, ನಾಗೇಂದ್ರ, ಮಂಜುಳಾ, ಶ್ರೀನಿವಾಸ್, ಜಯಲಕ್ಷ್ಮಿ, ಅರುಣ್ ಮುಂತಾದವರು ಇದ್ದರು.
Comments are closed.