ಗುಬ್ಬಿ: ಸಣ್ಣಪುಟ್ಟ ಸಮುದಾಯಗಳು ಸಂಘಟನೆ, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಡಬದಲ್ಲಿ ತಾಲ್ಲೂಕು ಮಟ್ಟದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಸಮುದಾಯ ಸಂಘಟಿತರಾಗದೆ ಹೋದರೆ ಆ ಸಮುದಾಯಗಳು ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತವೆ, ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡಬೇಕು ಎಂದ ಅವರು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಒದಗಿಸಬೇಕಿದೆ, ಸವಿತಾ ಸಮಾಜದ ಸಂಘಟನೆಯನ್ನು ನೋಡಿದಾಗ ಖುಷಿಯಾಗುತ್ತದೆ, ಸಮುದಾಯ ಭವನ ಕಟ್ಟಡದ ಒಂದೇ ಬಾರಿಗೆ 20 ಲಕ್ಷ ರೂಪಾಯಿ ಹಾಕಿ ಕೊಡಲಾಗುವುದು ಎಂದು ಭರವಸೆ ನೀಡಿ ತಳ ಸಮುದಾಯಗಳನ್ನು ಮೇಲೆತ್ತುವ ದೃಷ್ಟಿಯಿಂದ ತಳ ಸಮುದಾಯಗಳ ಧ್ವನಿಯಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ ತಾಲೂಕಿನ ನಿಟ್ಟೂರು ಹಾಗಲವಾಡಿ, ಕಡಬ,ಗುಬ್ಬಿ ಹೀಗೆ ನಾವು ನಮ್ಮ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಎಲ್ಲೆ ಜಾಗ ಕೇಳಿದರೂ ಕಟ್ಟಡಕ್ಕೆ ಸಹಾಯ ಕೇಳಿದಾಗ ತುಂಬು ಮನಸ್ಸಿನಿಂದ ಶಾಸಕರು ಕೊಡುತ್ತಿದ್ದಾರೆ, ಖಂಡಿತವಾಗಿ ನಾವೆಲ್ಲರೂ ಅವರ ಜೊತೆಯಲ್ಲೇ ಇದ್ದುಕೊಂಡು ನಮ್ಮ ಸಮಾಜವನ್ನು ಸದೃಢವಾಗಿ ಕಟ್ಟಿಕೊಳ್ಳಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಕಲಾವಿದರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು.
ಸವಿತ ಸಮಾಜ ಯುವ ಪಡೆಯ ಜಿಲ್ಲಾಧ್ಯಕ್ಷ ಕಟ್ವೆಲ್ ರಂಗನಾಥ್, ಹೋಬಳಿ ಅಧ್ಯಕ್ಷ ಕೆ.ಬಿ.ಗೋಪಾಲ್, ಮುಖಂಡರಾದ ಜಗನಾಥ್, ಅಶೋಕ, ಪುಟ್ಟನಾರಾಯಣಪ್ಪ, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ, ಕೆ.ನಾಗೇಶ್ ಬಾಬು, ರುದ್ರಪ್ಪ, ರಮೇಶ್, ನರಸಿಂಹಮೂರ್ತಿ, ರಘು, ರಾಜೇಶ್, ನವೀನ್, ವೆಂಕಟಾಚಲ ಸೇರಿದಂತೆ ಇನ್ನಿತರರರು ಇದ್ದರು.
Comments are closed.