ಮುತ್ತೂಟ್ ಪೈನಾನ್ಸ್ಗೆ ವಿದ್ಯಾವಾಹಿನಿ ವಿದ್ಯಾರ್ಥಿಗಳ ಆಯ್ಕೆ

4

Get real time updates directly on you device, subscribe now.


ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಎನ್ ಐಐಟಿಯ ಸಹಯೋಗದೊಂದಿಗೆ ಅಂತಿಮ ವರ್ಷದ ಬಿಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಎನ್ ಐಐಟಿ ಯಿಂದ ತರಬೇತಿ ನೀಡಿ ಇದರ ಮೂಲಕ ಮುತ್ತೂಟ್ ಪೈನಾನ್ ಸ್ ಕಂಪನಿಗೆ ಒಟ್ಟು 169 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಿಗೆ ಕಂಪನಿಯಿಂದ ಉದ್ಯೋಗ ಖಾತರಿ ಆಫರ್ ಲೆಟರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಫರ್ ಲೆಟರ್ ವಿತರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ಇಂದು ಉದ್ಯೋಗ ಪಡೆಯಲು ಶಿಕ್ಷಣದ ಜ್ಞಾನದೊಂದಿಗೆ, ಔದ್ಯೋಗಿಕ ತರಬೇತಿಗಳು ಮುಖ್ಯ. ತರಬೇತಿಗಳ ಮೂಲಕ ವಿದ್ಯಾರ್ಥಿಗಳು ಔದ್ಯೋಗಿಕ ಜ್ಞಾನ, ಕೌಶಲ್ಯ ಹಾಗೂ ಜವಬ್ದಾರಿಗಳನ್ನು ಅರಿತು ಉದ್ಯೋಗದಲ್ಲಿ ಕಾರ್ಯನಿರ್ವಹಿಸಲು ಸಶಕ್ತರಾಗುತ್ತಾರೆ. ಈ ದೃಷ್ಟಿಯಿಂದಲೇ ನಾವು ಎನ್ಐಐಟಿಯ ಸಹಯೋಗದಿಂದ ನಮ್ಮ ವಿದ್ಯಾರ್ಥಿಗಳು ತರಬೇತಿ ಪಡೆದು ಮುಂಚೂಣಿಯಲ್ಲಿರುವ ಮುತ್ತೂಟ್ ಪೈನಾನ್ ಸ್ ಕಂಪನಿಗೆ ಒಟ್ಟು 169 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರ ಔದ್ಯೋಗಿಕ ಬದುಕು ಸುಖಕರವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಸಹಕರಿಸಿದಂತಹ ಎನ್ಐಐಟಿಯ ಪ್ಲೇಸ್ ಮೆಂಟ್ ಮ್ಯಾನೇಜರ್ ರಂಜಿತ.ಬಿ.ಬಿ. ಹಾಗೂ ಮೂತ್ತೂಟ್ ಫೈನಾನ್ ಸ್ ಎಚ್ಆರ್ ಮ್ಯಾನೇಜರ್ ಪ್ರಕಾಶ್.ಬಿ, ಅವರಿಗೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎಸ್.ಪ್ರೇಮ್ ಹಾಗೂ ಉದ್ಯೋಗ ಮತ್ತು ಕೌಶಲ್ಯ ತರಬೇತುದಾರರಾದ ಕೌಸ್ಸರ್ ಜಿಯಾ ಇದ್ದರು.

Get real time updates directly on you device, subscribe now.

Comments are closed.

error: Content is protected !!