ಕುಣಿಗಲ್: ಕೊತ್ತಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ಶುಕ್ರವಾರ ನಿಗದಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿ ಸಕಾಲಕ್ಕೆ ಆಗಮಿಸದಿರುವುದು ಖಂಡಿಸಿ ಗ್ರಾಪಂ ಸದಸ್ಯರ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಕೊತ್ತಗೆರೆ ಗ್ರಾಪಂನಲ್ಲಿ 14 ಮಂದಿ ಸದಸ್ಯರಿದ್ದು, ಅಧ್ಯಕ್ಷರಾದ ಗೌತಮಿ, ಸದಸ್ಯರೊಂದಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಕಾಲಕಾಲಕ್ಕೆ ಸಭೆ ನಡೆಸದ ಕಾರಣ ಗ್ರಾಪಂ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷೆಯ ವಿರುದ್ಧ ಆವಿಶ್ವಾಸ ನಿರ್ಣಯವನ್ನು ಕೆಲ ದಿನಗಳ ಹಿಂದೆ ಸದಸ್ಯರು ಮಂಡಿಸಿದ್ದರು, ಈ ನಿಟ್ಟಿನಲ್ಲಿ ಅವಿಶ್ವಾಸ ನಿರ್ಣಯ ಸಭೆ ನಡೆಸಬೇಕಿದ್ದ ತುಮಕೂರು ಉಪವಿಭಾಗಾಧಿಕಾರಿ ಸಭೆ ಸುತ್ತೊಲೆಗೆ ಅನುಮತಿ ನೀಡಿದ್ದು ಸದರಿ ಸುತ್ತೊಲೆಗಳು ನಿಯಮಕ್ಕೆ ಒಳಪಟ್ಟಿಲ್ಲ ಎಂದು ಅಧ್ಯಕ್ಷೆ ಹೈಕೋರ್ಟ್ ಮೆಟ್ಟಿಲೇರಿ ಅವಿಶ್ವಾಸ ನಿರ್ಣಯ ಪ್ರಕ್ರಿಯೆಗೆ ತಡೆ ತಂದಿದ್ದರು.
ಈ ಮಧ್ಯೆ ಪುನಾಹ ಅವಿಶ್ವಾಸ ನಿರ್ಣಯ ಮಂಡನೆ ಹೊಸ ಪ್ರಕ್ರಿಯೆ ನಿಯಮಾನುಸಾರ ಮಂಡಿಸಿ ಎಲ್ಲಾ ಸದಸ್ಯರಿಗೆ ನಿಯಮಗಳಿಗೆ ಒಳಪಟ್ಟು ಸುತ್ತೋಲೆ ಹೊರಡಿಸಿದ್ದು ಫೆ.21 ರಂದು ಸಭೆ ಆಯೋಜಿಸಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆ ಸಭೆ ಶುಕ್ರವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆಯಬೇಕಿತ್ತು. ಈ ಕಾರ್ಯಕ್ರಮಕ್ಕೆ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಅಗಮಿಸಿ ಸಭೆಗೆ ನಡಾವಳಿ ಪ್ರಕ್ರಿಯೆ ನಿರ್ವಹಣೆ ಆರಂಭಿಸಿದ್ದರು, ಆದರೆ ಹನ್ನೆರಡುವರೆ ಗಂಟೆಯಾದರೂ ಉಪ ವಿಭಾಗಧಿಕಾರಿಗಳು ಗ್ರಾಪಂ ಕಾರ್ಯಾಲಯಕ್ಕೆ ಬಾರದ ಕಾರಣ ಅವಿಶ್ವಾಸ ನಿರ್ಣಯದ ಪರವಾಗಿದ್ದ ಸದಸ್ಯರ ತಳಮಳ ಹೆಚ್ಚಾಗಿ ಕಾವಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಸಭೆ ಬೇಗ ನಡೆಸಿ ಪ್ರಕ್ರಿಯೆ ಮುಗಿಸುವಂತೆ ಈ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳಿಗೆ ತುರ್ತಾಗಿ ಬರುವಂತೆ ತಿಳಿಸುವಂತೆ ಒತ್ತಾಯಿಸಿ ಬೆಂಬಲಿಗರಾದ ನಾರಾಯಣ, ರಾಜೇಶ ಇತರರು ವಾಗ್ವಾದ ನಡೆಸಿದರು.
ಉಪ ವಿಭಾಗಾಧಿಕಾರಿಗಳು ಸಚಿವರ ಸಭೆಯಲ್ಲಿದ್ದು ಸಭೆ ನಂತರ ಬರುವ ಸೂಚನೆ ನೀಡಿ ಸಮಧಾನ ಪಡಿಸಿದರು, ಮಧ್ಯಾಹ್ನ ಒಂದುವರೆ ಗಂಟೆಗೆ ಆಗಮಿಸಿದ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ಸಭೆಯಲ್ಲಿ ಹಾಜರಿದ್ದ14 ಸದಸ್ಯರ ಪೈಕಿ 10ಮಂದಿ ಸದಸ್ಯರ ನಿರ್ಣಯ ಅಂಗೀಕರಿಸಿ ಅವಿಶ್ವಾಸ ಪ್ರಕ್ರಿಯೆ ನಿರ್ವಹಿಸಿ ಸಭೆ ಮುಗಿಸಿದ್ದು, ಹಾಲಿ ಅಧ್ಯಕ್ಷೆಯನ್ನು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಸದಸ್ಯರು ಪದಚ್ಯುತಗೊಳಿಸಿದರು, ಸದರಿ ಪರಚ್ಯುತಿ ಪ್ರಕ್ರಿಯೆಯು ಹೈಕೋರ್ಟ್ನ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು ನಮೂದಿಸಲಾಗಿದೆ.
Comments are closed.