ಕುಖ್ಯಾತ ಮನೆಗಳ್ಳನ ಬಂಧನ- ಚಿನ್ನಾಭರಣ ವಶ

3

Get real time updates directly on you device, subscribe now.


ತಿಪಟೂರು: ರಾಜ್ಯದ ಹಲವೆಡೆ ಮನೆಕಳ್ಳತನ ಮಾಡುತ್ತಿದ್ದ, ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ್ಳತನ ಮಾಡಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದ್ದ ಆರೋಪಿ ಸಂತೋಷ (38) ಎಂಬುವವನ್ನು ತಿಪಟೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು, ತೋಟದ ಮನೆಗಳನ್ನು ಗುರುತಿಸಿ ಮನೆಗಳಲ್ಲಿರುವ ಚಿನ್ನಾಭರಣ, ಬೆಳ್ಳಿ ನಗದು ಹಣ, ಇತರೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು, ತನ್ನ ಬೈಕ್ ನಲ್ಲಿ ಓಡಾಡಿಕೊಂಡು ಗುರ್ತಿಸಿ ಕಳ್ಳತನ ಮಾಡುತ್ತಿದ್ದ.
ಆರೋಪಿಯ ವಿರುದ್ಧ ಈಗಾಗಲೇ ಹಾಸನ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ, ಪ್ರಕರಣ ದಾಖಲಾಗಿರುತ್ತವೆ, ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ಪತ್ತೆ ಮಾಡಲು ತಂಡವನ್ನು ರಚನೆ ಮಾಡಲಾಗಿತ್ತು, ಕಳ್ಳತನವಾದ ಮಾಲು ಪತ್ತೆಯಾಗಿದ್ದು, 9 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿರುತ್ತಾರೆ.

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿನಾಯಕ ಎನ್ ಶೆಟ್ಟಿಗೇರಿ ಮಾರ್ಗಸೂಚನೆ ಮೇರೆಗೆ ತಿಪಟೂರು ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ರವಿ.ಕೆ. ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ನಾಗರಾಜು.ಐ.ಡಿ, ಸಿಬ್ಬಂದಿ ಹನುಮಂತ ಕಮಕೇರಿ, ಶರತ್.ಎನ್.ಜೆ, ಚೇತನ್ ಕುಮಾರ್.ಜಿ.ಇ, ಇಮ್ರಾನ್.ಕೆ.ಆರ್, ಜೀಪ್ ಚಾಲಕ ಜೀವನ್ ಮತ್ತು ಮಲ್ಲಿಕಾರ್ಜುನ.ಎಂ.ಆರ್. ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!