ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

109

Get real time updates directly on you device, subscribe now.

ಕೊಡಿಗೇನಹಳ್ಳಿ: ರೈತರ ಜೀವನಾಡಿಯಾಗಿರುವ ನದಿ ಹಾಗೂ ಕೆರೆಯ ರಾಜಕಾಲುವೆ ಮತ್ತು ಕೆರೆಯ ಕಾಲುವೆಗಳು ಒತ್ತುವರಿಯಾಗಿವೆ ಎಂದು ರೈತರು ಉಪ ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿಗೆ ದೂರು ನೀಡಿದರು.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡಕೆರೆ, ಚಿಕ್ಕಕೆರೆ ಇದ್ದು, ಈ ಹಿಂದೆ ದೊಡ್ಡಕೆರೆ ಒತ್ತುವರಿಯಾಗಿತ್ತು, ಲೋಕಾಯುಕ್ತ ನ್ಯಾಯಾಲಯ ಆದೇಶದಿಂದ ಒತ್ತುವರಿ ತೆರವುಗೊಳಿಸಿದೆ, ಹಾಗೆ ಚಿಕ್ಕಕೆರೆ ಒತ್ತುವರಿಯಾಗಿದ್ದು ಇದರ ಒತ್ತುವರಿ ತೆರವಿಗೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಆದೇಶವಾಗಿದೆ, ಈ ಕೆರೆಗಳಿಗೆ ಸಂಬಂಧಿಸಿದ ರಾಜಕಾಲುವೆಗಳು, ಕೆರೆಯ ಕಾಲುವೆಗಳನ್ನು ತಕ್ಷಣ ಗ್ರಾಮ ಪಂಚಾಯಿತಿ ಮತ್ತು ಸಂಬಂಧ ಪಟ್ಟ ಇಲಾಖೆಗಳು ಒತ್ತುವರಿ ತೆರವುಗೊಳಿಸಬೇಕು ಎಂದು ಚಿಕ್ಕಕೆರೆ ತೆರವು ಮೂಲ ಅರ್ಜಿದಾರ ರಾಜಗೋಪಾಲರೆಡ್ಡಿ ಆಗ್ರಹಿಸಿದರು.
ರೈತರು ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಜಕಾಲುವೆಗಳು ಕೆರೆ ಕಾಲುವೆಗಳ ಒತ್ತುವರಿ ಅರ್ಜಿ ನೀಡಲು ಹೋದಾಗ ಗ್ರಾಪಂ ಪಿಡಿಓ ಹಾಗೂ ಕಾರ್ಯದರ್ಶಿ ಕೋವಿಡ್ ನಿಯಂತ್ರಣ ವಿಷಯವಾಗಿ ತಾಪಂ ಮತ್ತು ಜಿಪಂನಲ್ಲಿ ಇಲಾಖೆಯ ಅಧಿಕಾರಿಗಳ ಮೀಟಿಂಗ್ ಇರುವುದರಿಂದ ಕರವಸೂಲಿಗಾರ ಲೋಕೇಶ್ ಅರ್ಜಿ ಸ್ವೀಕರಿಸಿ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಕಾಲುವೆ ರಾಜಕಾಲುವೆಗಳ ಒತ್ತುವರಿಗೆ ಅರ್ಜಿ ಸ್ವೀಕರಿಸಿದ ಉಪ ತಹಶೀಲ್ದಾರ್ ನವೀನ್ ಅರ್ಜಿ ಸ್ವೀಕರಿಸಿ ಈ ದೂರಿನ ಬಗ್ಗೆ ತಕ್ಷಣ ಕ್ರಮ ಜರುಗಿಸಲು ಮುಂದಿನ ಕ್ರಮಕ್ಕೆ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎಂ.ರಾಜೇಶ್, ಸದಸ್ಯರಾದ ದೇವರಾಜ್ರಾವ್, ಮುಖಂಡರಾದ ಮುಕ್ತಿಯಾರ್, ಮಾರುತಿ, ರೈತರ ಪರವಾಗಿ ಅರ್ಜಿದಾರ ಗಂಕಾರ್ ಅಪ್ಪರೆಡ್ಡಿ, ನರಸಿಂಹರೆಡ್ಡಿ, ಸಾಮಾಜಿಕ ಹೋರಾಟಗಾರ ಹನುಮಂತರಾಯಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!