ಅಧಿಕಾರಿಗಳ ನಡೆಗೆ ವ್ಯಾಪಾರಿಗಳ ಆಕ್ರೋಶ

ಕುಣಿಗಲ್ ನಲ್ಲಿ ಅಂಗಡಿಗಳ ಬಂದ್

507

Get real time updates directly on you device, subscribe now.

ಕುಣಿಗಲ್: ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳ ದಿಡೀರ್ ಕಾರ್ಯಾಚರಣೆಗೆ ಬೆಚ್ಚಿಬಿದ್ದ ವ್ಯಾಪಾರಿಗಳು ಗೊಣಗಿಕೊಂಡು ಬಾಗಿಲು ಹಾಕಿದ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು.
ಪಟ್ಟಣದಲ್ಲಿ ಮಳಿಗೆ ವರ್ತಕರು ಎಂದಿನಂತೆ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದರು, ಗುರುವಾರ ಮಧ್ಯಾಹ್ನದ ವೇಳೆಗೆ ದಿಡೀರ್ ಕಾರ್ಯಾಚರಣೆಗೆ ಇಳಿದ ಪೊಲೀಸರು, ಪುರಸಭೆ ಅಧಿಕಾರಿಗಳು ದಿನಸಿ, ಹಣ್ಣು ತರಕಾರಿ, ಹಾಲು, ಹೂವಿನ, ಕಬ್ಬಿಣದ ವ್ಯಾಪಾರದ ಅಂಗಡಿಗಳನ್ನು ಹೊರತುಪಡಿಸಿ ಅಂಗಡಿ ಬಾಗಿಲು ಮುಚ್ಚುವಂತೆ ಒತ್ತಡ ಹಾಕಿದರು. ಇದರಿಂದ ವ್ಯಾಪಾರಿಗಳು ಪರದಾಡುವಂತಾದರೆ ಚಿನ್ನಬೆಳ್ಳಿ ವ್ಯಾಪಾರಿಗಳು, ಬಟ್ಟೆ ಅಂಗಡಿ ವ್ಯಾಪಾರಿ ಏಕಾಏಕಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಮಧ್ಯೆ ಚಪ್ಪಲಿ ಅಂಗಡಿ, ಫೋಟೋ ಸ್ಟುಡಿಯೋ, ಪುಸ್ತಕ ಅಂಗಡಿಗಳನ್ನು ಬಂದ್ ಮಾಡಿಸಿದಾಗ ಮಾಲೀಕರು ಅಧಿಕಾರಿಗಳ ಕ್ರಮ ಖಂಡಿಸಿ ಗೊಣಗಿಕೊಂಡೆ ಬಾಗಿಲು ಹಾಕಿದರು.
ಕೆಲ ಹೋಟೆಲ್ಗಳು ಪಾರ್ಸೆಲ್ ಮೂಲಕ ವಹಿವಾಟು ನಡೆಸಿದರೆ ಮತ್ತೆ ಕೆಲ ಹೋಟೆಲ್ಗಳು ಪಾರ್ಸೆಲ್ ಗಿರಾಕಿ ಬಾರದೆ ಬಾಗಿಲು ಮುಚ್ಚಿದವು, ಟೀ ಅಂಗಡಿ ಮಾಲೀಕರು ಏಕಾಏಕಿ ಅಧಿಕಾರಿಗಳ ಕ್ರಮದಿಂದ ಮೊದಲೇ ಖರೀದಿ ಮಾಡಿ ಕಾಯಿಸಿಟ್ಟಿದ್ದ ಹಾಲು ಏನು ಮಾಡಬೇಕೆಂದು ತೋಚದೆ ಹಿಡಿಶಾಪ ಹಾಕಿಕೊಂಡು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು, ಎಲ್ಲಿಯವರೆಗೂ ಬಾಗಿಲು ಹಾಕಬೇಕು ಎಂದು ಹೇಳಿಲ್ಲ ಎಂತಲೂ ಚರ್ಚೆ ನಡೆಸಿದರು, 21 ರಿಂದ ರಾತ್ರಿ 9ರ ನಂತರದ ಕರ್ಫ್ಯೂ ಅಚರಣೆ ಹಿನ್ನೆಲೆಯಲ್ಲಿ ರಾತ್ರಿ ಎಂಟು ಗಂಟೆಗೆ ಪಟ್ಟಣದ ಬಹತೇಕ ಮಳಿಗೆಯವರು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚಿದರು.

Get real time updates directly on you device, subscribe now.

Comments are closed.

error: Content is protected !!