ಕೊರೊನಾಗೆ ಬಾಲಕ ಬಲಿ

538

Get real time updates directly on you device, subscribe now.

An electron microscope image showing the novel coronavirus, also known as 2019-nCoV, emerging from the surface of cells cultured in the lab.
ಕುಣಿಗಲ್: ಕೊವಿಡ್ ಗೆ 14 ವರ್ಷದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಅಗ್ರಹಾರದಲ್ಲಿ ವಾಸವಿರುವ ಕಿರಣ್ ಎಂಬ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಮಗ ಗಗನ್(14)ಗೆ ಕಳೆದ ಐದು ದಿನದ ಹಿಂದೆ ಕೊವಿಡ್ ದೃಡಪಟ್ಟಿತ್ತು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಹಿನ್ನೆಲೆಯಲ್ಲಿ ಆತನನ್ನು ಮನೆಯಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು, ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ತಪಾಸಣೆ ನಡೆಸಿ ಅಗತ್ಯ ಔಷಧೋಪಚಾರ ನೀಡುತ್ತಿದ್ದರು. ಬುಧವಾರ ಸಂಜೆ ಚೆನ್ನಾಗಿಯೆ ಇದ್ದ ಬಾಲಕ ರಾತ್ರಿ ದಿಡೀರ್ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಆತನನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರು ಕ್ರಾಸ್ನ ಆಸ್ಪತ್ರೆಗೆ ಕರೆದೊಯ್ದು ಹಾಸಿಗೆ ಲಭ್ಯ ಇಲ್ಲದ ಕಾರಣ ತುಮಕೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಗುರುವಾರ ಬೆಳಗ್ಗೆ ಪಟ್ಟಣದಲ್ಲಿ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜನತೆ ಬೆಚ್ಚಿಬಿದ್ದಿದ್ದಾರೆ, ಪಟ್ಟಣದಲ್ಲಿ ಸೋಂಕಿಗೆ 14 ವಯೋಮಾನದ ಮಕ್ಕಳು ಬಲಿಯಾಗುವುದು ನಂಬಲಾಗುತ್ತಿಲ್ಲ, ಇನ್ನಾದರೂ ಮಕ್ಕಳು ಎಚ್ಚರದಿಂದ ಇರಬೇಕಿದೆ, ಪೋಷಕರು ಜಾಗೃತಿ ವಹಿಸಬೇಕೆಂದು ಪುರಸಭೆ ಸದಸ್ಯ ಗೋಪಿ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!