2ಸಾವಿರ ಸನಿಹಕೆ ಸೋಂಕಿತರು : ಮತ್ತೆ ನಾಲ್ಕು ಸಾವು

ಬೇಕಾಬಿಟ್ಟಿ ಅಡ್ಡಾಡಿದ್ರೆ ಲಾಠಿ ಏಟು!

319

Get real time updates directly on you device, subscribe now.

ತುಮಕೂರು: ಜಿಲ್ಲೆಯಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದೆ. ತುಮಕೂರು ಸೇರಿದಂತೆ ಗುಬ್ಬಿ, ಮಧುಗಿರಿ, ಪಾವಗಡ, ಶಿರಾದಲ್ಲಿ ಅತೀ ಹೆಚ್ಚು ಪ್ರಕರಣಗಳು ಶುಕ್ರವಾರಕ್ಕೆ ದಾಖಲಾಗಿವೆ. ಮತ್ತೆ 1,838 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 36,071 ಏರಿಕೆ ಕಂಡಿದೆ. 7,520 ಸಕ್ರಿಯ ಪ್ರಕರಣಗಳ ಪೈಕಿ 342 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 975, ಚಿನಾಹಳ್ಳಿ 98, ಗುಬ್ಬಿ 141, ಕೊರಟಗೆರೆ 27, ಕುಣಿಗಲ್ 54, ಮಧುಗಿರಿ 143, ಪಾವಗಡ 104, ಶಿರಾ 167, ತಿಪಟೂರು 53, ತುರುವೇಕೆರೆಯಲ್ಲಿ 76 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಒಟ್ಟು ನಾಲ್ವರು ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ತುಮಕೂರು ನಗರದ ಉಪ್ಪಾರಹಳ್ಳಿಯ ಮಹಿಳೆ (44) ಹಾಗೂ ಅನ್ಯಕಾರಣದಿಂದ ಮಧುಗಿರಿ ತಾಲೂಕಿನ ನೀರಕಲ್ಲು ಗ್ರಾಮದ ಮಹಿಳೆ (54), ತುಮಕೂರಿನ ಎಸ್.ಐ.ಟಿ ಬಡವಣೆಯ ಮಹಿಳೆ (82), ತುಮಕೂರು ತಾಲೂಕಿನಚನ್ನಪ್ಪಯ್ಯನ ಗ್ರಾಮದ ಮಹಿಳೆ (38) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!