ಮಧುಗಿರಿ: ಐದು ಬೆರಳಿನ ಗೂಬೆ ಮತ್ತು ಎರಡು ತಲೆ ಹಾವನ್ನು ಮನೆಯಲ್ಲಿ ಇಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆ ಎಂದು ನಂಬಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ 5 ಜನ ಆರೋಪಿಗಳಿಗೆ ತಲಾ 7 ವರ್ಷ ಕಠಿಣ ಕಾರಗೃಹ ಶಿಕ್ಷೆ ಮತ್ತು ತಲಾ 10000 ದಂಡವನ್ನು ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರ ಗೌಡ ಪಾಟೀಲ್ ಆದೇಶಿಸಿ ತೀರ್ಪು ನೀಡಿದ್ದಾರೆ.
2018 ನವಂಬರ್ 28 ರಂದು ಸಾಯಂಕಾಲ 6 ಗಂಟೆ ಸಮಯದಲ್ಲಿ ಕೊರಟಗೆರೆ ಪೊಲೀಸ್ ಠಾಣಾ ಸರಹದ್ದಿನ ಮಾದೇನಹಳ್ಳಿ ತಾಂಡದ ಸಮೀಪದ ಮಧುಗಿರಿ ಗೌರಿಬಿದನೂರು ರಸ್ತೆಯ ಕಾಶಾಪುರ ಬಸ್ ನಿಲ್ದಾಣದ ತಂಗುದಾಣದ ಬಳಿ ಆರೋಪಿತರಾದ ಆನಂದ ತಿಮ್ಮ (38), ದೀಪ (41), ಜಯ (48 ), ಅಜಯ್ (28), ವಿಜಯ ಕುಮಾರ್ (29)ಗೆ ಶಿಕ್ಷೆ ನೀಡಲಾಗಿದೆ, ಇವರೆಲ್ಲರೂ ಹಕ್ಕಿಪಿಕ್ಕಿ ಕಾಲೋನಿ, ಹೊಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು ನಿವಾಸಿಗಳಾಗಿದ್ದು, ಇವರು ಜನರಿಗೆ ಐದು ಬೆರಳಿನ ಗೂಬೆ ಮತ್ತು ಎರಡು ತಲೆ ಹಾವನ್ನು ಮನೆಯಲ್ಲಿ ಇಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆಂದು ನಂಬಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತುಮಕೂರಿನ ಆರಕ್ಷಕ ನಿರೀಕ್ಷಕ ಸಿಇಎನ್ ಪೊಲೀಸ್ ಠಾಣೆಯ ರಾಘವೇಂದ್ರ ಇವರಿಗೆ ಮಾಹಿತಿ ತಿಳಿಸಿದ್ದು ಪೊಲೀಸ್ ಸಿಬ್ಬಂದ್ದಿ ಆರೋಪಿತರ ಮೇಲೆ ದಾಳಿ ಕೈಗೊಂಡು ಆರೋಪಿತರ ಬಳಿಯಿದ್ದ ಚಾಕು, ರಾಡು ಮತ್ತು ಕಾರದ ಪುಡಿ ವಶಪಡಿಸಿಕೊಂಡು ಬಂಧಿಸಿದ್ದರು.
ಪ್ರಕರಣದ ತನಿಖೆಯನ್ನು ಕೊರಟಗೆರೆ ಠಾಣೆಯ ನಿರೀಕ್ಷಕ ಮುನಿರಾಜು ಮತ್ತು ಪ್ರಭಾಕರ್ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ನಿರಂಜನಮೂರ್ತಿ ಬಿ.ಎಂ. ಇವರು ವಾದ ಮಂಡಿಸಿದ್ದರು.
ಸುಲಿಗೆಕೋರರಿಗೆ ಶಿಕ್ಷೆ
Get real time updates directly on you device, subscribe now.
Comments are closed.