ಮತ್ತೆ ಸಾವಿರದಾಚೆಗೆ ಸೋಂಕಿತರು

ತುಮಕೂರು, ಶಿರಾ, ಪಾವಗಡ, ಚಿನಾಹಳ್ಳಿಯಲ್ಲಿ ಸೋಂಕಿತರು ಹೆಚ್ಚು

310

Get real time updates directly on you device, subscribe now.

ತುಮಕೂರು: ಮತ್ತೆ ಸಾವಿರದಾಚೆಗೆ ಸೋಂಕಿತರು ಪತ್ತೆಯಾಗುತ್ತಿರುವುದು ಮುಂದುವರೆದಿದೆ. ಶನಿವಾರದಂದು 1,441 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 689 ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 37,512 ಏರಿಕೆ ಕಂಡಿದೆ. 8,598 ಸಕ್ರಿಯ ಪ್ರಕರಣಗಳ ಪೈಕಿ 361 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 689, ಚಿನಾಹಳ್ಳಿ 100, ಗುಬ್ಬಿ 70, ಕೊರಟಗೆರೆ 61, ಕುಣಿಗಲ್ 36, ಮಧುಗಿರಿ 56, ಪಾವಗಡ 119, ಶಿರಾ 143, ತಿಪಟೂರು 73, ತುರುವೇಕೆರೆಯಲ್ಲಿ 94 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!