ತುರುವೇಕೆರೆ: ಕ್ಷೇತ್ರ ವ್ಯಾಪ್ತಿಯ ಅತ್ಯಂತ ಕಡುಬಡವರಿಗೆ ಕೊರೊನಾ ಸೋಂಕು ತಗುಲಿದರೆ ತಮ್ಮ ಸ್ವಂತ ಹಣದಲ್ಲಿ ಅಗತ್ಯ ಚಿಕಿತ್ಸೆ ಕೊಡಿಸುವುದಾಗಿ ಶಾಸಕ ಮಸಾಲ ಜಯರಾಮ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಕೇವಲ ತುರುವೇಕೆರೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ, ಈ ಹಿನ್ನೆಲೆಯಲ್ಲಿ ಕ್ಷೇತ್ರದ ನಾಗರಿಕರು ಸುರಕ್ಷಾ ವಿಧಾನ ಅನುಸರಿಸುವ ಮೂಲಕ ಕೊರೊನಾ ಬರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ, ಸಹಾಯದ ಅಗತ್ಯ ಕಂಡುಬಂದರೆ ಕೂಡಲೇ ನನ್ನನ್ನು ಸಂಪರ್ಕಿಸಿ ನಾನು ನೆರವಿಗೆ ಧಾವಿಸುತ್ತೇನೆ, ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ, ಆಮ್ಲಜನಕದ ಕೊರತೆ ಕಂಡುಬಂದರೆ ಖಾಸಗಿಯಾಗಿ ನನ್ನ ಸ್ವಂತ ಖರೀದಿಸಿ ಕ್ಷೇತ್ರದ ಜನತೆಯ ಆರೋಗ್ಯ ಕಾಪಾಡಲು ಸಿದ್ಧನಿದ್ದೇನೆ ಎಂದರು.
ತಾಲೂಕಿನ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಿದ್ದಾರೆ, ಹೆಚ್ಚುವರಿಯಾಗಿ ಮುರಾರ್ಜಿ ವಸತಿ ಶಾಲೆಯಲ್ಲಿ ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು, ಸದ್ಯ ತಾಲೂಕು ಆಸ್ಪತ್ರೆಯಲ್ಲಿ 5 ಬೆಡ್ನ ಐಸಿಯು ಸೇವೆಗೆ ಲಭ್ಯವಿದ್ದು, ರೋಗಿಗಳ ಸಂಖ್ಯೆ ಹೆಚ್ಚಾದರೆ ಬೆಡ್ ಒದಗಿಸಲು ಪೂರಕ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ನಿತ್ಯ ಕೋವಿಡ್ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಲಾಗುತ್ತಿದ್ದು, ಕಳೆದ 10 ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಮತ್ತೆ 26 ರ ಸೋಮವಾರ ಮತ್ತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.
ಕಳೆದ ಬಾರಿ ಕೋವಿಡ್ ಸಮಯದಲ್ಲಿ ಕ್ಯಾನ್ಸರ್, ಹೃದ್ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಗಿತ್ತು, ಅಗತ್ಯವುಳ್ಳವರು ಕರೆ ಮಾಡಿ ತಿಳಿಸಿದರೆ ಉಚಿತವಾಗಿ ಔಷಧಿ ಸರಬರಾಜು ಮಾಡಲಾಗುವುದು, ಒಟ್ಟಾರೆ ಕ್ಷೇತ್ರದ ಜನತೆಯ ಜನಾರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸಿದ್ಧನಿದ್ದೇನೆ, ಕ್ಷೇತ್ರದ ನಾಗರಿಕರು ಆತಂಕ ಬಿಟ್ಟು ಸುರಕ್ಷತಾ ವಿಧಾನ ಪಾಲಿಸುವ ಮೂಲಕ ಕೊರೊನಾ ಮುಕ್ತ ತಾಲೂಕನ್ನಾಗಿಸಲು ಕೈ ಜೋಡಿಸುವಂತೆ ಮನವಿ ಮಾಡಿದರು.
ಬಡವರಿಗೆ ಕೊರೊನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ: ಮಸಾಲೆ
Get real time updates directly on you device, subscribe now.
Prev Post
Comments are closed.