ಕೊರೊನಾದಿಂದ ತತ್ತರಿಸುತ್ತಿರುವ ಜನತೆಗೆ ನೈತಿಕ ಸ್ಥೈರ್ಯ ಹೇಳದ ಶಾಸಕ: ಸ್ವಾಮಿ

500

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಜನತೆ ಕೊರೊನಾ ಎಡರನೇ ಅಲೆಯ ತೀವ್ರತೆಗೆ ತತ್ತರಿಸುತ್ತಿರುವ ವೇಳೆ ಶಾಸಕ ಮಸಾಲಜಯರಾಮ್ ನೈತಿಕ ಸ್ಥೈರ್ಯ ಹೇಳುವುದನ್ನು ಮರೆತಿದ್ದಾರೆ ಎಂದು ಜೆ.ಡಿ.ಎಸ್. ಅಧ್ಯಕ್ಷ ಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆಯಷ್ಟೇ ನೆಟ್ಟಿಗೆರೆ ಕ್ರಾಸ್ನಲ್ಲಿ ನೆಡೆದ ಘಟನೆ ಕುರಿತಂತೆ ಜನತೆ ರೋಸಿ ಹೋಗಿದ್ದಾರೆ. ಈ ವಿಚಾರದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಹೆಸರನ್ನು ಶಾಸಕರು ಮಸಾಲಜಯರಾಮ್ ಥಳುಕು ಹಾಕಿದ್ದರು. ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೇವರ ಮುಂದೆ ಪ್ರಮಾಣ ಮಾಡುವಂತೆ ಪಂಥಾಹ್ವಾನ ನೀಡಿದ್ದರು. ತಮ್ಮ ಮೋಬೈಲ್ನನ್ನು ವಶಪಡಿಸಿಕೊಂಡು ತನಿಖೆ ನೆಡೆಸಲಿ ಎಂದು ಆಗ್ರಹಿಸಿದ್ದರು. ಈ ವಿಚಾರದಲ್ಲಿ ಶಾಸಕ ಮೌನ ವಹಿಸಿರುವುದು ಯಾತಕ್ಕೆ ಎಂಬ ಅಸಲಿ ಸಂಗತಿ ಕ್ಷೇತ್ರದ ಜನತೆಗೆ ಅರ್ಥವಾಗಿದೆ. ಇದೀಗ ಕೊರೊನಾ ಮಾರಿಯ ಅಬ್ಬರ ಹೆಚ್ಚಾಗಿದ್ದು ಜನತೆ ನೆರವಿಗೆ ಶಾಸಕರು ಧಾವಿಸಲಿ ಎಂದು ಆಗ್ರಹಿಸಿದರು.
ಮಾಜಿ ಶಾಸಕರು ತಲೆತಪ್ಪಿಸಿಕೊಂಡು ತಿರುಗುತ್ತಿದ್ದಾರೆಂದು ಬಿ.ಜೆ.ಪಿ.ವಕ್ತಾರರರು ಹೇಳಿಕೆ ನೀಡಿದ್ದರು. ಮಾಜಿ ಶಾಸಕ ಕೃಷ್ಣಪ್ಪವನರ ಮೇಲೆ 307 ಪ್ರಕರಣ ದಾಖಲಾಗಿಲ್ಲವೆಂದ ಮೇಲೆ ತಲೆ ಮರೆಸಿಕೊಳ್ಳುವ ಅಗತ್ಯವೇನಿದೆ. ಜನಪರ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಅದನ್ನು ಸಂಬಂಧಪಟ್ಟ ವಕೀಲರು ನೋಡಿಕೊಳ್ಳುತ್ತಾರೆ. ಅಸಲಿ ಸಂಗತಿ ಎಂದರೇ ಕೋವಿಡ್ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸಾದ್ಯವಾಗಿಲ್ಲ ಎಂದು ಪ.ಪಂ. ಸದಸ್ಯ ಹಾಗೂ ವಕೀಲ ಎನ್,ಆರ್. ಸುರೇಶ್ ಮಾಜಿ ಶಾಸಕ ಕೃಷ್ಣಪ್ಪನವರ ಗೈರನ್ನು ಸಮರ್ಥಿಸಿಕೊಂಡಿದ್ದಾರೆ.
ಶಾಸಕ ಮಸಾಲಜಯರಾಮ್ ಅವರು ಅಮಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಪೋಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳ ಬರುತ್ತಿದೆ. ಶಾಸಕರು ಜನತೆ ತಮಗೆ ನೀಡಿದ ಅಧಿಕಾರ ಬಳಸಿ ತಾಲೂಕಿನಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಮುಂದಾಗಲಿ ಎಂದು ಎ.ಪಿ.ಎಂ.ಸಿ. ಉಪಾದ್ಯಕ್ಷ ಮಾಚೇನಹಳ್ಳಿ ಲೋಕೇಶ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷರಾದ ಛಾಯಾಶಂಕರೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಯ್ಯ ಇದ್ದರು.

Get real time updates directly on you device, subscribe now.

Comments are closed.

error: Content is protected !!