5ಲಕ್ಷ ಮೌಲ್ಯದ ಚಿನ್ನಾಭರಣ ಕಳವು

453

Get real time updates directly on you device, subscribe now.

ಕೊರಟಗೆರೆ: ಒಂಟಿ ಮನೆಯಲ್ಲಿದ್ದ 5ಲಕ್ಷ 60ಸಾವಿರ ಮೌಲ್ಯದ 71ಗ್ರಾಂ ಚಿನ್ನ ಮತ್ತು 3ಲಕ್ಷ ನಗದು ಹಣವನ್ನು ಕಳ್ಳರ ತಂಡವೊಂದು ಮನೆಯ ಬೀಗ ಹೊಡೆದುರಾತ್ರೋರಾತ್ರಿ ಕಳ್ಳತನ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಗ್ರಾ.ಪಂ ವ್ಯಾಪ್ತಿಯ ಜೋನಿಗರಹಳ್ಳಿ-ತೋವಿನಕೆರೆ ಮುಖ್ಯರಸ್ತೆ ಸಮೀಪದ ಅನಿತಾ ಎಂಬುವರಿಗೆ ಸೇರಿದ ಒಂಟೆ ಮನೆಯಲ್ಲಿ ಗುರುವಾರ ತಡರಾತ್ರಿ ಕಳ್ಳತನ ನಡೆದಿದೆ.
ಅನಿತಾ ಕುಟುಂಸ್ಥರು ತುಮಕೂರು ಸಮೀಪದ ಊರುಕೆರೆಗೆ ತೆರಳಿದ ವೇಳೆ ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗವನ್ನು ಹೊಡೆದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ಮುತ್ತುರಾಜು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!